ಗೋಣಿಕೊಪ್ಪ ವರದಿ, ಮೇ ೨೬ : ಯುಕೋ ಸಂಘಟನೆ ವತಿಯಿಂದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಕೊಡವ ಅಭಿವೃದ್ಧಿ ನಿಗಮಕ್ಕೆ ನೂರು ಕೋಟಿ ಅನುದಾನ ನೀಡಲು ಶುಕ್ರವಾರ ಒತ್ತಾಯಿಸ ಲಾಯಿತು. ಕೊಡವ ಸಾಂಪ್ರದಾಯಿಕ ಚಾಲೆಯನ್ನು ನೀಡಿ ಅಭಿನಂದಿಸ ಲಾಯಿತು. ಒಂದಷ್ಟು ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು.

ಸರ್ಕಾರಿ ಆದೇಶದ ಮೂಲಕ ಘೋಷಣೆಯಾಗಿರುವ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ನೂರು ಕೋಟಿ ರೂಪಾಯಿ ಗಳ ಅನುದಾನವನ್ನು ನೀಡುವುದು. ಹಿಂದುಳಿದ ವರ್ಗಗಳ ಮೀಸಲಾತಿಯ ರಾಜ್ಯ ಪಟ್ಟಿಯಲ್ಲಿ ಪ್ರವರ್ಗ ೩ಎ ಯಲ್ಲಿ ವರ್ಗೀಕರಣ ಕೊಡವರನ್ನು, ಪ್ರವರ್ಗ ೩ಎ ಯ ಕೇಂದ್ರ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಕೊಡವರ ಪಾರಂಪರಿಕ ತಾಣಗಳಾದ ಮಂದ್ -ಮಾನಿ, ಕ್ಯಾಕೊಳ ತೂಟ್‌ಂಗಳ ದಂತಹ ಸಾಂಸ್ಕೃತಿಕ ಕೇಂದ್ರಗಳ ಕಂದಾಯ ದಾಖಲಾತಿಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ, ಸಂಪುಟ ರಚನೆಯ ನಂತರ ಸರ್ಕಾರದೊಂದಿಗೆ ವ್ಯವಹರಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ, ಯುಕೋ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಪ್ರಮುಖರಾದ ಚೆಪ್ಪುಡಿರ ಸುಜು ಕರುಂಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ನೆಲ್ಲಮಕ್ಕಡ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನಂದೇಟಿರ ರವಿ ಸುಬ್ಬಯ್ಯ, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ, ಮಚ್ಚಮಾಡ ರಮೇಶ್, ತೀತಿಮಾಡ ಬೋಸು ಅಯ್ಯಪ್ಪ, ಪುದಿಯೊಕ್ಕಡ ದಿನೇಶ್, ಬೊಳಿಯಂಗಡ ಬೋಪಣ್ಣ, ಪಳಂಗAಡ ಸುಬ್ಬಣ್ಣ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಪಾಂಡAಡ ಸ್ವಾತಿ, ಬೊಳ್ಳಚೆಟ್ಟಿರ ಮೈನ, ಕಳ್ಳಿಚಂಡ ದೀನ ಉತ್ತಪ್ಪ, ತನ್ವಿ ಉತ್ತಪ್ಪ ಹಾಜರಿದ್ದರು.