ಮಡಿಕೇರಿ, ಮೇ ೨೬: ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ಕೆ. ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಿ.ವೈ.ಸಿ. ಕ್ರಿಕೆಟರ್ಸ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸೌಹಾರ್ದ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಹಳೆ ತಾಲೂಕಿನ ಅಲ್ ಅಮೀನ್ ತಂಡ ಜಯ ಸಾಧಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪಾಲೆಮಾಡು ಕಿಂಗ್ಸ್ ಇಲೆವೆನ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಲ್ ಅಮೀನ್ ತಂಡ ನಿಗದಿತ ೪ ಓವರ್ಗಳಲ್ಲಿ ೪ ವಿಕೆಟ್ ಕಳೆದುಕೊಂಡು ೪೨ರನ್ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತು. ಇದನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ತಂಡ ೪ ಓವರ್ನಲ್ಲಿ ೬ ವಿಕೆಟ್ ನಷ್ಟಕ್ಕೆ ಕೇವಲ ೩೯ ರನ್ ಗಳಿಸಿ ಪರಾಭವಗೊಂಡಿತು .
ವಿಜೇತ ತಂಡಕ್ಕೆ ೧೫,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಪಾಲೆಮಾಡು ಕಿಂಗ್ಸ್ ಇಲೆವೆನ್ ತಂಡಕ್ಕೆ ೧೦,೦೦೦ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.
ಕಳೆದ ೩ ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ನಾಪೋಕ್ಲು ವಿಭಾಗದ ಸುಮಾರು ೧೬ ತಂಡಗಳು ಪಾಲ್ಗೊಂಡಿದ್ದವು.
ಪAದ್ಯಾವಳಿಯಲ್ಲಿ ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಚೆರಿಯಪರಂಬು ತಂಡದ ಆಫೀಲ್ ಪಡೆದುಕೊಂಡರು. ಉತ್ತಮ ಬ್ಯಾಟ್ಸ್ಮನ್ ಆಗಿ ಪಾಲೆಮಾಡು ತಂಡದ ದಿನು, ಉತ್ತಮ ಬೌಲರ್ ಆಗಿ ಅಲ್ ಅಮೀನ್ ತಂಡದ ಜೀವನ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅಲ್ ಅಮೀನ್ ತಂಡದ ಅರ್ಷಾದ್ ಪಡೆದುಕೊಂಡರು.ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಅಲ್ ಅಮೀನ್ ತಂಡದ ಮುನೀರ್ ಭಾಜನರಾದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಪ್ರಮುಖರಾದ ಅಶ್ರಫ್, ಆಶಿಕ್, ಮುಬಶಿರ್, ಸಂಶುದ್ದಿನ್, ಸಶಿ, ಪಂದ್ಯಾವಳಿಯ ಆಯೋಜಕ ರಾದ ಶಮೀರ್, ಝುಬೈರ್, ಅನ್ವರ್, ಸಲಾಂ ಮುನಝಿರ್, ಅಲ್ತಾಫ್, ಸಾಬಿತ್, ಸಲಾಂ, ರಿಜ್ವಾನ್, ಹಾಗೂ ಕೆಎಂಸಿಸಿಯ ಪದಾಧಿಕಾರಿಗಳು ಹಾಜರಿದ್ದರು.