ಸಿದ್ದಾಪುರ, ಮೇ ೨೬: ಸಿದ್ದಾಪುರ ಸಮೀಪದ ಇಂಜಿಲಗೆರೆಯ ಶ್ರೀ ಪೂಮಡಪುರ ಮುತ್ತಪ್ಪ ಕ್ಷೇತ್ರದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರೀ ಮುತ್ತಪ್ಪ, ಶಾಸ್ತಪ್ಪ, ಗುಳಿಗ ಹಾಗೂ ಭಗವತಿ ತೆರೆಗಳು ಎರಡು ದಿನಗಳ ಕಾಲ ನಡೆದವು. ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಶ್ರೀ ಪೂಮಡಪುರ ಮುತ್ತಪ್ಪ ಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.