ನಾಪೋಕ್ಲು, ಮೇ ೨೬: ನಾಪೋಕ್ಲು ವಲಯದ ಮಾಜಿ ಸೈನಿಕರ ಸಂಘದ ಮಹಾಸಭೆ ಮೇ ೨೯ರಂದು ಸೋಮವಾರ ನಡೆಯಲಿದೆ. ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿದ್ದು, ಸಂಘದ ಸರ್ವ ಸದಸ್ಯರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘದ ಪ್ರಕಟಣೆ ಕೋರಿದೆ.