*ಗೋಣಿಕೊಪ್ಪ, ಮೇ ೨೬: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಗುರುವಾರ ಹಣ್ಣು-ಹಂಪಲು ವಿತರಣೆ ಮಾಡಲಾಯಿತು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗ್ರೀಷ್ಮಾ ಬೋಜಮ್ಮ, ಹಿರಿಯ ಶುಶ್ರೂಷಕಿಯರಾದ ಸೌಮ್ಯ, ಲಲಿತಾ ವಿತರಣೆ ಮಾಡಿದರು.

ಪೊನ್ನಂಪೇಟೆ ತಾಲೂಕು ನೂತನವಾಗಿ ಅಸ್ಥಿತ್ವಕ್ಕೆ ಬಂದ ನಂತರ ಕಳೆದ ವರ್ಷ ಮೇ ೨೫ ರಂದು ಸ್ಥಾಪನೆಗೊಂಡ ಸಂಘ ಒಂದು ವರ್ಷ ಪೂರೈಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು. ಒಂದು ವರ್ಷದಲ್ಲಿ ಸಮಾಜಮುಖಿ ೪೦ ಕಾರ್ಯಕ್ರಮ ನಡೆಸಿರುವ ಬಗ್ಗೆ ತಿಳಿಸಲಾಯಿತು.

ಡಾ. ಗ್ರೀಷ್ಮಾ ಬೋಜಮ್ಮ ಮಾತನಾಡಿ, ಕೇಂದ್ರದ ಆವರಣ ಮಾತ್ರವಲ್ಲದೆ ಆವರಣದ ಹೊರಗೂ ಸ್ವಚ್ಚತೆ ಕಾಪಾಡಿಕೊಳ್ಳಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಆವರಣದಲ್ಲಿರುವ ಉದ್ಯಾನವನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಗ್ರಾಮ ಪಂಚಾಯಿತಿಯಿAದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಇದರಿಂದ ನೈರ್ಮಲ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಕೇಂದ್ರದಿAದ ರೋಗಿಗಳಿಗೆ ಉತ್ತಮ ರೀತಿಯ ಸೇವೆ ದೊರೆಯುತ್ತಿದ್ದು, ಉದ್ಯಾನ ಅಭಿವೃದ್ಧಿ ಕೂಡ ಮುಖ್ಯ ಎಂದರು.

ಸAಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರಾದ ಕೆ.ಬಿ. ಜಗದೀಶ್ ಜೋಡುಬೀಟಿ, ಚಿಮ್ಮಣ್ಣಮಾಡ ದರ್ಶನ್ ದೇವಯ್ಯ, ಸದಸ್ಯ ಮನೋಜ್‌ಕುಮಾರ್ ಇದ್ದರು.