ಕುಶಾಲನಗರ, ಮೇ ೨೪: ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಅಧಿಕಾರಿಗಳು ಕೆಲವು ಸದಸ್ಯರುಗಳು ತನ್ನ ಮೇಲೆ ಮಾಡುತ್ತಿರುವ ಆರೋಪಗಳ ಬಗ್ಗೆ ಕುಶಾಲನಗರ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳಿಗೆ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳ ಪ್ರಕಾಶ್, ಸದಸ್ಯೆ ಜಯಶೀಲ, ಸಮಾಜ ಸೇವಕ ನಂಜುAಡಸ್ವಾಮಿ ಮತ್ತಿತರರು ದಾಖಲೆ ಸಹಿತ ದೂರು ಸಲ್ಲಿಸಿದರು.

ಈ ಸಂದರ್ಭ ಕೊಡಗು ಜಿಲ್ಲೆಯ ಲೋಕಾಯುಕ್ತ ಘಟಕದ ಪೊಲೀಸ್ ಉಪ ಅಧೀಕ್ಷಕ ಪವನ್ ಕುಮಾರ್, ಇನ್ಸೆ÷್ಪಕ್ಟರ್ ಲೋಕೇಶ್ ಅವರುಗಳು ಕೂಡಿಗೆ ಗ್ರಾಮ ಪಂಚಾಯಿತಿಯ ಹಿಂದಿನ ಅಭಿವೃದ್ಧಿ ಅಧಿಕಾರಿ ಆಯಿಷ, ಕಚೇರಿ ಸಹಾಯಕಿ ಜ್ಯೋತಿ ಅವರುಗಳನ್ನು ಕರೆಸಿ ಮಾಹಿತಿ ಪಡೆದರು. ಇದೇ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಮಂಗಳ ಅವರು ಅಧಿಕಾರಿಗಳ ಎದುರು ಕಣ್ಣೀರು ಸುರಿಸಿ ತನ್ನ ಅಸಹಾಯಕತೆ ತೋಡಿಕೊಂಡ ದೃಶ್ಯವೂ ಕಂಡು ಬಂತು.

ನAತರ ದೂರುದಾರರನ್ನು ಮಡಿಕೇರಿ ಕಚೇರಿಗೆ ಕರೆಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಪಂಚಾಯಿತಿ ಅವ್ಯವಹಾರಗಳ ಬಗ್ಗೆ ಸಮಗ್ರ ದಾಖಲೆಗಳು ಹಾಗೂ ಅಧ್ಯಕ್ಷೆ ಮಂಗಳ ಪ್ರಕಾಶ್ ಅವರಿಂದ ಲಿಖಿತ ಹೇಳಿಕೆಗಳನ್ನು ಪಡೆದರು.

ಕೂಡಿಗೆ ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ಅವ್ಯವಹಾರದ ಬಗ್ಗೆ ‘ಶಕ್ತಿ' ಪತ್ರಿಕೆಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಸಮಗ್ರ ತನಿಖಾ ವರದಿ ಪ್ರಕಟಗೊಂಡಿತ್ತು. ವರದಿ ಬೆನ್ನಲ್ಲೇ ತನಿಖೆ ಕೈಗೊಂಡ ಜಿಲ್ಲಾ ಪಂಚಾಯಿತಿ ಒಂಬುಡ್ಸಮನ್ ಅಧಿಕಾರಿಗಳು ಈಗಾಗಲೇ ದಂಡ ವಿಧಿಸಿ ಸರ್ಕಾರಕ್ಕೆ ಹಣ ಪಾವತಿಸುವಂತೆ ಸಂಬAಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. -ಚಂದ್ರಮೋಹನ್