ಕೂಡಿಗೆ, ಮೇ ೨೪: ಶ್ರೀ ದಂಡಿನಮ್ಮ ಬಸವೇಶ್ವರ, ಶ್ರೀ ಮುತ್ತತ್ತಿ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ವಾರ್ಷಿಕ ಗ್ರಾಮ ದೇವತೆಯ ಹಬ್ಬ, ಕೊಂಡೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮವು ತಾ.೨೬ ಮತ್ತು ೨೭ ರಂದು ನಡೆಯಲಿದೆ.
ತಾ.೨೬ ರಂದು ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ, ದುರ್ಗಿ ಶಾಂತಿಹೋಮ, ಬಲಿಹರಣ, ಪೂರ್ಣಾಹುತಿ, ಶ್ರೀ ದೇವಿಯ ಸಂಪ್ರೋಕ್ಷಣೆ, ಪುಣ್ಯಾಹ ಮತ್ತು ಅಷ್ಟದಿಗ್ಬಂಧನೆ, ಪಂಚಾಮೃತ ಅಭಿಷೇಕ ಮತ್ತು ಅರ್ಚನೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ ಟಿ ಗಿರೀಶ್ ತಿಳಿಸಿದ್ದಾರೆ.
ಅದೇ ದಿನ ಸಂಜೆ ೮ ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಕಳಸ ಪೂಜೆ ,ಗಂಗೆ ಪೂಜೆ ನಂತರ ಹಣ್ಣಡಗೆ ಉತ್ಸವವು ಕಾವೇರಿ ನದಿಯಿಂದ ದಂಡಿನಮ್ಮ ದೇವಸ್ಥಾನದವರೆಗೆ ಗ್ರಾಮ ಪ್ರಮುಖ ಬೀದಿಗಳಲ್ಲಿ ಸಾಗಿದ ನಂತರ ದೇವಾಲಯ ಮುಂಭಾಗದಲ್ಲಿ ಕೊಂಡೋತ್ಸವ ಹಾಗೂ ಮುಂಜಾನೆಯ ಉಯ್ಯಾಲೆ ಮಹೋತ್ಸವ ನಡೆಯಲಿದೆ.
ತಾ.೨೭ ರಂದು ಶ್ರೀ ದಂಡಿನಮ್ಮ ದೇವಿಗೆ ಪೂಜೆ ಮಹಾಮಂಗಳಾರತಿ, ದೇವಾಲಯ ಆವರಣದಲ್ಲಿ ಜಾತ್ರೋತ್ಸವವು ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಗುರುಪಾದಸ್ವಾಮಿ ಆರಾಧ್ಯ ತಿಳಿಸಿದ್ದಾರೆ.