ಮನುಜ ಉಪಯೋಗಿಸುವ ಎಲ್ಲ ವಸ್ತುಗಳಿಗೂ ಒಂದೊAದು ದಿನಾಚರಣೆ ಇದೆ ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ಬಳಸಲಾಗುವ ‘ಟವೆಲ್’ಗೂ ಕೂಡ ಒಂದು ದಿನವಿದೆ ಎಂದರೆ ಅಚ್ಚರಿಯಾಗದಿರದು..! ಮೇ ೨೫ ಅದರ ದಿನವಾಗಿದೆ. ಆಸ್ಟಿçÃಯಾದ ಲೇಖಕ ಡೋಗ್ಲಸ್ ಆಡಮ್ಸ್ ಅವರ ಜ್ಞಾಪಕಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ. ೨೦೦೧ ರಿಂದ ಈ ಆಚರಣೆ ಜಾರಿಗೆ ಬಂದಿದೆ. ಶಿಕ್ಷಕರಾಗಿದ್ದ ಆಡಮ್ಸ್ ತಾವು ತರಗತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪ್ರತಿನಿತ್ಯ ಕೂಡ ಟವೆಲ್ ಅನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರಂತೆ. ಈ ಬಗ್ಗೆ ಅವರು ತಮ್ಮ ‘ ದಿ ಹಿಚ್ಚಿರ‍್ಸ್ ಗೈಡ್ ಟು ದಿ ಗ್ಯಾಲಕ್ಸಿ’ ಯಲ್ಲಿ ಮಾಹಿತಿ ಹಂಚಿಕೊAಡಿದ್ದಾರೆ. ಆಡಮ್ಸ್ ಅವರ ಸಾವಿನ ನಂತರ ಅವರ ಅಭಿಮಾನಿಗಳು ಈ ದಿನದ ಆಚರಣೆಯನ್ನು ಜಾರಿಗೆ ತಂದಿದ್ದಾರೆ. ಸ್ನೇಹಿತರೆಲ್ಲ ಒಟ್ಟು ಸೇರಿ ಟವೆಲ್ ಧರಿಸಿಕೊಂಡು ಚಹಾ ಪಾರ್ಟಿಯೊಂದಿಗೆ ಪುಸ್ತಕಗಳನ್ನು ಓದುತ್ತಾ ಲೇಖಕನಿಗೆ ಗೌರವ ಸಲ್ಲಿಸುವದರೊಂದಿಗೆ ‘ಟವೆಲ್ ದಿನ’ ವನ್ನು ಆಚರಿಸಲಾಗುತ್ತದೆ.

‘ಹ್ಯಾಪಿ ಟವೆಲ್ ಡೇ’