ಗೋಣಿಕೊಪ್ಪಲು, ಮೇ ೨೪: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಗೊಂಡು ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸಿದ ಎ.ಎಸ್. ಪೊನ್ನಣ್ಣ ಅವರಿಗೆ ಗಡಿಭಾಗವಾದ ತಿತಿಮತಿ ಆನೆಚೌಕೂರು ಗೇಟ್ ಬಳಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ವಾಗತ ಕೋರಲಾಯಿತು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವದಲ್ಲಿ ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕೆÀ್ಷ ಕೋಳೆರ ಭಾರತಿ, ಸೇವಾದಳದ ರಾಜ್ಯ ಕಾರ್ಯದರ್ಶಿ ತೆರಸ ವಿಕ್ಟರ್, ಸೇರಿದಂತೆ ಅನೇಕರು ಶಾಸಕರನ್ನು ಹೂಗುಚ್ಚ ನೀಡಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಎ.ಎಸ್. ಪೊನ್ನಣ್ಣ, ಕೊಡಗಿಗೆ ಸಚಿವ ಸ್ಥಾನದ ಬೇಡಿಕೆಯನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬಳಿ ಇಡಲಾಗಿದೆ. ಸ್ಪಂದಿಸುವ ಭರವಸೆ ಇದೆ, ಕೊಡಗು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುತ್ತದೆ. ಪಕ್ಷದ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತದೆ ಎಂದರು.
ಈ ವೇಳೆ ಮಾಜಿ ಜಿ.ಪಂ. ಸದಸ್ಯರಾದ ಮೂಕಳೇರ ಕುಶಾಲಪ್ಪ, ಪಿ.ಆರ್.ಪಂಕಜ, ಶ್ರೀಜಾ ಅಚ್ಚುತ್ತನ್ ಮಾಜಿ ತಾ.ಪಂ. ಸದಸ್ಯರಾದ ಶಾಜಿ ಅಚ್ಚುತ್ತನ್, ಅಣ್ಣೀರ ಹರೀಶ್, ಟಾಟು ಮೊಣ್ಣಪ್ಪ, ಅಜಿತ್ ಅಯ್ಯಪ್ಪ, ನಾಮೇರ ಅಂಕಿತ್, ಪ್ರಮೋದ್ ಗಣಪತಿ, ಧನಲಕ್ಷಿö್ಮÃ, ಶಿವಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.