ಕಡಂಗ, ಮೇ ೨೪ : ಕಳೆದ ವಾರ ಸುರಿದ ಭಾರಿ ಗಾಳಿ ಮಳೆಯಿಂದ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮೊಟ್ಟೆ ವೀರಾಜಪೇಟೆ ಕಡಂಗ ಮುಖ್ಯ ರಸ್ತೆಯಲ್ಲಿ ಭಾರಿ ಗಾತ್ರದ ಮರ ರಸ್ತೆ ನಡುವಿನಲ್ಲಿ ಬಿದ್ದು ಅದರ ತುಂಡು ರಸ್ತೆ ಬದಿಯಲ್ಲಿದ್ದು ಸಂಚಾರಕ್ಕೆ ತೊಂದರೆಯಾಗಿವೆ.
ಈ ಸಮಸ್ಯೆಯನ್ನು ಅರಿತ ಕಡಂಗ ಎಸ್‌ವೈಎಸ್, ಎಸ್‌ಕೆಎಸ್‌ಎಸ್‌ಎಫ್ ಸದಸ್ಯರು ಸ್ವತಹ ಅಲ್ಲಿಗೆ ತೆರಳಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಸದಸ್ಯರಾದ ಜಮಾಅತ್ ಅಧ್ಯಕ್ಷ ಅಬ್ದುಲ್ಲ ಝಕರಿಯ ಇರ್ಶಾದ್ ಇಸಾಕ್, ಸಿಯಬ್, ಸಿದ್ದಿಕ್, ರಜಾಕ್ ಹಾರಿಸ್ ಮುಂತಾದವರು ಹಾಜರಿದ್ದರು