ಮಡಿಕೇರಿ, ಮೇ ೨೪: ರಾಮ ರಾಜ್ಯದ ಕನಸು ನನಸಾಗಬೇಕಾದರೆ ಮಹಿಳೆಯರು ಮತ್ತಷ್ಟು ಸಂಘಟಿತರಾಗಬೇಕೆAದು ಕಂಬಿಬಾಣೆ ರಾಮ ಮಂದಿರ ಹಾಗೂ ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಶಶಿಕಾಂತ್ ರೈ ಕರೆ ನೀಡಿದ್ದಾರೆ.

ಕಂಬಿಬಾಣೆಯ ಕಮಲ ನೆಹರು ಯುವತಿ ಸಂಘದಿAದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತೊಟ್ಟಿಲು ತೂಗುವ ಕೈಗಳು ಇಂದು ಜಗತ್ತನ್ನು ಆಳುತ್ತಿವೆ. ನಾಲ್ಕು ಗೋಡೆಯ ಮಧ್ಯೆ ಇರುವ ಮಹಿಳೆಯರು ಇಂದು ಹಲವು ಕ್ಷೇತ್ರದಲ್ಲಿ ಸಾಧಿಸುತ್ತಿದ್ದಾರೆ ಎಂದು ಹೇಳಿದರು. ಪ್ರಥಮ ವರ್ಷದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಪರಿಶ್ರಮ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಯುವತಿ ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಕಾಫಿ ಬೆಳೆಗಾರರಾದ ಸಾಯಿ ಕುಮಾರ್ ಮಾತನಾಡಿ, ಯುವತಿ ಸಂಘದಿAದ ಆರು ತಿಂಗಳಿಗೊಮ್ಮೆ ಸಮಾಜಮುಖಿ ಕಾರ್ಯಕ್ರಮ ಮಾಡಿದರೆ ಹತ್ತು ಸಾವಿರ ನೀಡುತ್ತೇನೆ ಎಂದು ಘೋಷಿಸಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಗಣೇಶ್, ದಿನೇಶ್, ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕ ಗಳಿಸಿದ ಅಫ್ರಿನಾ, ಮಹಮ್ಮದ್ ಸಿನಾನ ಅವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಯಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ಶಂಭು, ಲಕ್ಷಿö್ಮ ರವಿ, ಕುಸುಮ, ಐಸಮ್ಮ ಮತ್ತಿತರರಿಗೆ ಗೌರವ ಸಲ್ಲಿಸಲಾಯಿತು.

ಕಮಲ ನೆಹರು ಯುವತಿ ಸಂಘದ ಹಿರಿಯರಾದ ಮುತ್ತಮ್ಮ ಶಾಂತಮ್ಮ, ಹಾಲಮ್ಮ ಜನಾರ್ಧನ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಕಾರ್ಯಕ್ರಮದಲ್ಲಿ ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ನಾಗಪ್ಪ, ಸುಭಾಷ್ ಯುವಕ ಸಂಘದ ಗೌರವಾಧ್ಯಕ್ಷ ಲವಾ ಶಾಂತಪ್ಪ, ಕಂಬಿಬಾಣೆ ಗ್ರಾಪಂ ಪಿಡಿಒ ಮಧುಮತಿ, ಮಾಜಿ ಯೋಧ ಕರ್ನಲ್ ಉತ್ತಯ್ಯ, ಕಂಬಿಬಾಣೆ ಅಸ್ಸಾರುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷ ಮೊಹಿದಿನ್, ಸುಭಾಷ್ ಯೂತ್ ಕ್ಲಬ್ ಅಧ್ಯಕ್ಷರು ಗಣೇಶ್, ಕಮಲ ನೆಹರು ಯುವತಿ ಸಂಘದ ಅಧ್ಯಕ್ಷೆ ವೀಣಾ ರಾಮಚಂದ್ರ, ಗೌರವಾಧ್ಯಕ್ಷೆ ಉಷಾ ಮುರುಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಒಕ್ಕೂಟ ಅಧ್ಯಕ್ಷ ಚಂದ್ರಾವತಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಅಶ್ವಿನಿ, ಸಂಘದ ಕಾರ್ಯದರ್ಶಿ ಪೂರ್ಣಿಮ ಪ್ರಭಾಕರ್, ಉಪಾಧ್ಯಕ್ಷೆ ಚಂದ್ರಾವತಿ, ಖಜಾಂಚಿ ಅಕ್ಷತಾ, ಮತ್ತಿತರರು ಹಾಜರಿದ್ದರು. ಪೂರ್ಣಿಮ ನಿರೂಪಿಸಿದರೆ, ಸೌಮ್ಯ ಸ್ವಾಗತಿಸಿ, ವಂದಿಸಿದರು.