ಮಡಿಕೇರಿ, ಮೇ ೨೪: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು, ಮೇ ೩೦ ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
೧ ನೇ ತರಗತಿಯಿಂದ ವೃತ್ತಿಪರ ಕೋರ್ಸ್ವರೆಗೆ ವ್ಯಾಸಾಂಗ ಮಾಡುತ್ತಿರುವ ಸದಸ್ಯರ ಮಕ್ಕಳು ೨೦೨೨-೨೩ ನೇ ಸಾಲಿನಲ್ಲಿ ಶೇ ೮೦ ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. ಅಂಕಪಟ್ಟಿ ಹಾಗೂ ಭಾವಚಿತ್ರ ನೀಡುವುದು ಖಡ್ಡಾಯ. ತಾ. ೩೦ ರ ಒಳಗಾಗಿ ಅರ್ಜಿಯನ್ನು ಪ್ರೆಸ್ ಕ್ಲಬ್‌ಗೆ ತಲುಪಿಸಲು ಕೋರಲಾಗಿದೆ.