ಕುಶಾಲನಗರ, ಮೇ ೨೪: ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಜಯ ಭಾಸ್ಕರ್ ಅವರು ಕುಶಾಲನಗರಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದರು.

ಗಡಿಭಾಗದ ಅರಣ್ಯ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಚೆಕ್‌ಪೋಸ್ಟ್ನಲ್ಲಿ ನಡೆಯುವ ದಿನನಿತ್ಯದ ಕೆಲಸ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು. ನಂತರ ಅರಣ್ಯ ಇಲಾಖೆ ಮತ್ತಿತರ ಇಲಾಖೆಗಳ ಕಚೇರಿಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭ ಗಡಿ ಭಾಗದ ಅರಣ್ಯ ತಪಾಸಣಾ ಕೇಂದ್ರಕ್ಕೆ ಖಾಯಂ ಸಿಬ್ಬಂದಿಗಳ ನೇಮಕ, ಚೆಕ್‌ಪೋಸ್ಟ್ ಕೇಂದ್ರದ ನೌಕರರು ಎದುರಿಸುತ್ತಿರುವ ಭದ್ರತಾ ಸಮಸ್ಯೆ ಮತ್ತು ಸ್ಥಳೀಯ ನ್ಯೂನತೆಗಳ ಬಗ್ಗೆ ಆಯೋಗದ ಅಧ್ಯಕ್ಷರ ಗಮನಕ್ಕೆ ತರಲಾಯಿತು.

ಈ ಸಂದರ್ಭ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್, ಅರಣ್ಯ ಅಧಿಕಾರಿಗಳಾದ ಎ.ಎ. ಗೋಪಾಲ್, ಕೆ.ವಿ. ಶಿವರಾಮ್, ದೇವಯ್ಯ ವಿಭೂತಿ ಮತ್ತಿತರ ಅಧಿಕಾರಿಗಳು ಇದ್ದರು.