ವೀರಾಜಪೇಟೆ, ಮೇ ೨೩: ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಗಳು ಒಂದೇ ದಾರದಲ್ಲಿ ಪೋಣಿಸಿರುವ ಮಣಿಗಳಂತೆ. ಹೊಸ ದೃಷ್ಟಿಕೋನದೊಂದಿಗೆ ಹೊಸ ಆವಿಷ್ಕಾರಗಳು ಹುಟ್ಟುಹಾಕುವ ಅನಿವಾರ್ಯತೆ ಯುವ ಸಮಾಜಕ್ಕೆ ಇದೆ ಎಂದು ಜ್ಞಾನ ಕಾವೇರಿ ಕೊಡಗು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಅಶೋಕ್ ಸಂಗಪ್ಪ ಆಲೂರ್ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿ ಸಲಾಗಿದ್ದ "ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಪ್ರಸ್ತುತ ಜಾಗತಿಕ ಮಟ್ಟದ ಹೊಸ ದೃಷ್ಟಿಕೋನ" ಎಂಬ ವಿಷಯದ ಬಗ್ಗೆ ಒಂದು ದಿನದ ಅಂರ‍್ರಾಷ್ಟಿçÃಯ ಕಾರ್ಯಾಗಾರ ನಡೆಯಿತು. ಕಾರ್ಯಾಗಾರಕ್ಕೆ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದ ಅಶೋಕ್ ಎಸ್. ಅವರು, ಪ್ರಸ್ತುತವಾಗಿ ದೇಶ ಮತ್ತು ವಿಶ್ವವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಸಾದನೆ ಗೈದಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಉಗಮ ವಾಗುತ್ತಿವೆ. ತಂತ್ರಜ್ಞಾನ ಬಳಕೆಯು ಮಾನವ ನಿರ್ಮಿತವಾಗಿದೆ. ಆದರೂ, ತಂತ್ರಜ್ಞಾನದಿAದ ಪರಿಸರದಿಂದ ಲಭಿಸುವ ವಸ್ತುಗಳನ್ನು ಪುನರ್ ನಿರ್ಮಾಣ ಮಾಡಲು ಅಸಾಧÀ್ಯವಾಗಿದೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಎಲ್ಲೆಡೆ ಪಸರಿಸಿದೆ. ಮಾನವನ ತೀಕ್ಷ÷್ಣವಾದ ಬುದ್ಧಿ ಮತೆಯ ಶಕ್ತಿಯಿಂದ ಉದಯವಾದ ಕೃತಕ ವಸ್ತುಗಳು ಜಾಗತಿಕ ವಸ್ತುವಾಗಿ ಪರಿಣಮಿಸಿವೆ. ಕೃತಕ ಬುದ್ಧಿಮತೆ ಯಿಂದ ಸೃಷ್ಟಿಗೊಂಡ ವಸ್ತುಗಳು ಜೀವವಿಲ್ಲ ವಾದರೂ ಮಾನವ ವರ್ತಿಸುವಂತೆ ರೂಪುಗೊಳ್ಳುತ್ತಿವೆ. ಆದರೆ ಯಾವುದೇ ವಸ್ತುಗಳು ಶಾಶ್ವತ ವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಯುವ ಸಮುದಾಯವು ಹೊಸ ಚಿಂತನೆಯೊAದಿಗೆ ಸಮಾಜಮುಖಿ, ಪರಿಸರ ಸ್ನೇಹಿ ವಸ್ತುಗಳನ್ನು ಆವಿಷ್ಕಾರ ಮಾಡುವಲ್ಲಿ ಮುಂದಾಗಬೇಕು. ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮ ಸಹಕಾರವಾಗಲು ವಿದ್ಯಾರ್ಥಿಗಳು ಪಡೆದ ಜ್ಞಾನವನ್ನು, ಸದ್ಬಳಕೆಯಾಗುವ ಗುರಿ ಹೊಂದಬೇಕು ಎಂದು ಹೇಳಿದರು. ಮೈಸೂರಿನ ಸಂತ ಫಿಲೋಮಿನ ಪದವಿ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ರೂತ್ ಶಾಂತ ಕುಮಾರಿ ಅವರು ತಮ್ಮ ಭಾಷಣದಲ್ಲಿ ಜಗತ್ತು ಇಂದು ಹೊಸ ತ್ರಂತ್ರಜ್ಞಾನ ಗಳನ್ನು ಅಳವಡಿಸಿಕೊಂಡು ಆವಿಷ್ಕಾರ ಗಳನ್ನು ಹುಟ್ಟುಹಾಕುತ್ತಿದೆೆ. ಪ್ರಕೃತಿಯಲ್ಲಿ ಕಂಡುಬರುವ ಪ್ರಾಣಿ ಸಂಕುಲಗಳ ಚಲನವಲನಗಳ ಮೇಲೆ ಅಧ್ಯಯನ ನಡೆಸಿ ಪ್ರಕೃತಿಗೆ ಪೂರಕವಾಗಿ ವಾಹನ ಗಳು ಮತ್ತು ಇತರ ವಸ್ತುಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಬದಲಾವಣೆಯಾಗಿದೆ. ಕೃತಕ ಬುದ್ಧಿಮತೆಯಿಂದ ತಯಾರಾಗುವ ವಸ್ತುಗಳ ಬಗ್ಗೆ ಯುವ ಸಮೂಹದಲ್ಲಿ ಆಸಕ್ತಿ ಮೂಡಿದೆ. ವಿವಿಧ ಕ್ಷೇತ್ರಗಳಲ್ಲಿರುವ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಬೇಕು. ಅಲ್ಲದೆ ಪರಿಹಾರ ಕಂಡುಕೊಳ್ಳಲು ಯುವ ಜನತೆಗೆ ಸಾಧÀ್ಯವಾಗಬೇಕು ಎಂದು ಹೇಳಿದರು.

ಎಫ್.ಎಂ.ಸಿ. ಕಾಲೇಜು ಮಡಿಕೇರಿಯ ನಿವೃತ್ತ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಜ್ಯ ಮತ್ತು ದೇಶ ವಿದೇಶದ ವಿದ್ಯಾರ್ಥಿಗಳು ಕಳುಹಿಸಿರುವ ವಿವಿಧ ವಿಭಾಗಗಳಲ್ಲಿನ ಪ್ರಬಂಧ ಪೀಠಿಕಾ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಬೇಕಾಗಿರುವ ರೀತಿಯಲ್ಲಿ ವಸ್ತು ತಯಾರಿಕೆಗೆ ಯುವ ಸಮೂಹ ಮುಂದಾಗಬೇಕು. ಆಯೋಜಿತ ಕಾರ್ಯಕ್ರಮವು ಪ್ರತಿಯೊಂದು ಕಾಲೇಜಿನಲ್ಲಿ ಆಯೋಜನೆ ಯಾಗಬೇಕು.

ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ಹೇಳಿದರು.

ಸಂತ ಅನ್ನಮ್ಮ ಪದವಿ ಕಾಲೇಜು ಮತ್ತು ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಅವರು ಕಾರ್ಯಕ್ರಮದ ಅಧÀ್ಯಕ್ಷತೆ ವಹಿಸಿ ಮಾತನಾಡಿ ವಿಜ್ಞಾನ, ತಂತ್ರಜ್ಞಾನ ವಾಣಿಜ್ಯ ಮತ್ತು ನಿರ್ವಹಣೆಗೆ ಸಂಬAಧಿಸಿದAತೆ ಅಂರ‍್ರಾಷ್ಟಿçÃಯ ವಿಚಾರ ಸಂಕಿರಣ ಕಾರ್ಯಕ್ರಮ ಕಾಲೇಜಿನಲ್ಲಿ ಆಯೋಜಿಸಿರುವುದು ಸಂತೋಷದಾಯಕ ಬೆಳವಣಿಗೆ ಯಾಗಿದೆ. ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಹೇಳಿದರು. ಸಂತ ಅನ್ನಮ್ಮ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಜ್ಞಾನ ಕಾವೇರಿ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ. ಅಶೋಕ್ ಎಸ್. ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರಬಂಧÀ ಪೀಠಿಕಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳÀಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ಡಾ. ಜಿ. ಅಜೇಯ್ ಕುಮಾರ್, ಎಸ್.ಡಿ.ಎಂ.ಐ.ಎA.ಡಿ ಮೈಸೂರು ಕಾಲೇಜಿನ ಪ್ರಾಧ್ಯಾಪಕ ಡಾ. ಮೌಸಮಿ ಸೆನ್ ಗುಪ್ತಾ, ಎಫ್.ಎಂ.ಸಿ. ಕಾಲೇಜು ಮಡಿಕೇರಿ ರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ. ಜೆ.ಜಿ. ಮಂಜುನಾಥ್, ಸಂತ ಅನ್ನಮ್ಮ ಕಾಲೇಜಿನ ರಸಾಯನಶಾಸ್ತç ವಿಭಾಗದ ಸಹ ಪ್ರಾಧ್ಯಾಪಕರಾದ ನಿಶಾ ಸಿ.ಎಲ್., ವಾಣಿಜ್ಯ ವಿಭಾಗದ ಹೆಚ್.ಓ.ಡಿ ದೃಶ್ಯ ಕೆ.ಪಿ. ಕಾರ್ಯಕ್ರಮ ಸಂಚಾಲಕರಾದ ಹೇಮಾ ಬಿ.ಡಿ. ಅವರುಗಳು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು, ರಸಾಯನ ಶಾಸ್ತç ವಿಭಾಗದ ಸಹ ಪ್ರಾಧ್ಯಾಪಕಿ ನಿಶಾ ಸಿ.ಎಲ್. ಅವರು ಸರ್ವರನ್ನು ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೂಜಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು, ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಶಿಲ್ಪ ಅವರು ವಂದಿಸಿದರು.

ಜಿಲ್ಲೆ, ರಾಜ್ಯ ಮತ್ತು ದೇಶದ ವಿವಿಧ ಸ್ಥಳಗಳ ಪದವಿ ಕಾಲೇಜು ವಿದ್ಯಾರ್ಥಿ ಗಳು ಸೇರಿದಂತೆ, ಸಂತ ಅನ್ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವಿವಿಧ ಕಾಲೇಜಿನ ಉಪನ್ಯಾಸಕರು, ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.