ಕೂಡಿಗೆ, ಮೇ ೨೩: ಧಾರ್ಮಿಕ ಮಹೋತ್ಸವಗಳು, ದೇವರ ಪೂಜೆ ಸಮಾಜದಲ್ಲಿ ಬಹುದೊಡ್ಡ ಪರಂಪರೆಯಾಗಿ ಬೆಳೆದಿವೆ. ಧಾರ್ಮಿಕ ಆಚರಣೆಗಳು ಜನರ ಬದುಕಿಗೆ ದಾರಿ ದೀಪವಾಗಲಿವೆ. ಇಂದಿನ ಯುವ ಸಮಾಜದವರು ಸಕಲ ವೇದಗಳ ಪುರಾಣಗಳ ಸಿದ್ಧಾಂತಗಳ ತಾತ್ವಿಕ ಗ್ರಂಥಗಳ ಸಾರವನ್ನು ತಿಳಿದು ಮುನ್ನಡೆಯ ಬೇಕಾಗಿದೆ ಎಂದು ಹಂಪೆಯ ದೇವಾಂಗ ಮಹಾಸಂಸ್ಥಾನದ ಪೀಠಧ್ಯಾಕ್ಷ ದಯಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.ಕುಶಾಲನಗರದ ಬೀದಿಯಲ್ಲಿ ಚೌಡೇಶ್ವರಿ ದೇವಾಲಯ ಸಮಿತಿಯ ವತಿಯಿಂದ ಇದೀಗ ನೂತನವಾಗಿ ನಿರ್ಮಿತವಾಗಿರುವ ಚೌಡೇಶ್ವರಿ ಅಮ್ಮನವರ ವಿಗ್ರಹವನ್ನು ಲೋಕಾರ್ಪಣೆ ಮಾಡಲಾಗಿದ್ದು ಅದರ ವೀಕ್ಷಣೆ ಮಾಡಿ ನಂತರ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸ್ವಾಮಿ ಭಾಗವಹಿಸಿದರು.

ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ರಾಜಶೇಖರ್, ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ವಿ. ರಾಜೇಶ್, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು (ರಾಕಿ,) ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ, ಕುಶಾಲನಗರ ಪುರಸಭೆ ಸದಸ್ಯ ಡಿ.ಕೆ. ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣ ಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ.ವಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ.ಎನ್. ವಿನೋದ್, ಸಂಚಾಲಕ ಡಿ.ಎನ್. ಶಶಿ ಸೇರಿದಂತೆ ಮಹಿಳಾ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು, ಯುವಕ ಸಂಘಟನೆಯ ಪ್ರಮುಖರು, ದೇವಾಲಯ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್, ಸಮುದಾಯದ ನೂರಾರು ಭಕ್ತರು ಹಾಜರಿದ್ದರು.