ಪಾಲಿಬೆಟ್ಟ, ಮೇ ೨೩: ಸಹಾರ ಯೂತ್‌ಕ್ಲಬ್ ಆಶ್ರಯದಲ್ಲಿ ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ೪ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ಸಾಗರ್ ಯೂತ್‌ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಎಚ್.ಎ ಮುಸ್ತಫ ಚಾಲನೆ ನೀಡಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ, ಸೌಹಾರ್ದತೆಗೆ ಹೆಸರುವಾಸಿ ಯಾಗಿರುವ ಗ್ರಾಮದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿದರು.

ಕೊಡಗು ಚಾಂಪಿಯನ್ ಲೀಗ್ (ಕೆಸಿಎಲ್) ಸ್ಥಾಪಕ ಎ.ಎಸ್ ಮುಸ್ತಫ ಮಾತನಾಡಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರ ಮೂಲಕ ಕ್ರೀಡಾ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಮುಸ್ಲಿA ಕಪ್ ಕಾರ್ಯಕ್ರಮದ ಅಧ್ಯಕ್ಷ ಉರೈಸ್ ಮಾತನಾಡಿ, ಕಾಲ್ಚೆಂಡು ಪಂದ್ಯಾಟ ಆರು ದಿನಗಳ ಕಾಲ ನಡೆಯಲಿದ್ದು, ಪಂದ್ಯಾಟದಲ್ಲಿ ಒಟ್ಟು ೭೨ ತಂಡಗಳು ಭಾಗವಹಿಸಲಿದ್ದು ಪ್ರತಿದಿನ ೧೫ ಪಂದ್ಯಾಟಗಳು ನಡೆಯಲಿವೆ. ಮೇ ೨೮ ರಂದು ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು. ಜಿಲ್ಲೆಯ ಜನಪ್ರತಿನಿಧಿ ಗಳು, ದಾನಿಗಳು, ಸಮಾಜ ಸೇವಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕೊಡಗು ಮುಸ್ಲಿಂ ಕ್ಲಬ್ ಅಧ್ಯಕ್ಷ ಸಲೀಂ, ಸ್ಥಾಪಕ ಅಧ್ಯಕ್ಷ ಆಸಿಫ್, ಸಹಾರ ಯೂಥ್ ಕ್ಲಬ್ ಅಧ್ಯಕ್ಷ ನೂಮಾನ್, ಮುಸ್ಲಿಂ ಕಫ್ ನ ಉಪಾಧ್ಯಕ್ಷ ಶಬ್ಬಿರ್, ಗೌರವ ಅಧ್ಯಕ್ಷ ಆಶ್ರಪ್, ಸರ್ವಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಸಾಗರ್ ಕ್ಲಬ್‌ನ ರದೀಶ್, ರವೀಂದ್ರ , ಪ್ರಮುಖರಾದ ಅನಿಲ್, ಇಬ್ರಾಹಿಂ, ನಿಶಾದ್, ಆಸೀಫ್ ಮುಜೀಬ್, ರಕ್ಷಿತ್, ಮುಂತಾದವರು ಹಾಜರಿದ್ದರು.