ಕೂಡಿಗೆ, ಮೇ ೨೩: ಕೂಡಿಗೆ ಕೆನರಾ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ ಕುಮಾರ್ ಸೀನಿಯರ್ ಮ್ಯಾನೇಜರ್ ಆಗಿ ಬಡ್ತಿ ಹೊಂದಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಬ್ಯಾಂಕ್ ನಿಂದ ವರ್ಗಾವಣೆಯಾದ ಮತ್ತಿಬ್ಬರು ಅನುಷಾ ಮತ್ತು ಜೈ ಕೃಷ್ಣ ಅವರಿಗೂ ಶಾಲು ಹೊದಿಸಿ ಫಲತಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಚ್, ಪಿ, ಶಿವಕುಮಾರ, ಅಖಿಲ್, ಅಮೃತ್, ಮಹೇಂದ್ರ , ಪಾಲಾಕ್ಷ ಸುಮ, ಹರ್ಷಿತ್, ಸುರೇಶ್ ಉಪಸ್ಥಿತರಿದ್ದರು.