ಮಡಿಕೇರಿ, ಮೇ ೨೩: ಕೊಡಗು ಜಿಲ್ಲೆ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ೧ ಹುದ್ದೆ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ೨ ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ ೨೦೨೩-೨೪ನೇ ಸಾಲಿನ ಸೀಮಿತ ಅವಧಿಗೆ ಮಡಿಕೇರಿ, ಕೊಡ್ಲಿಪೇಟೆ ಹಾಗೂ ಶಾಂತಳ್ಳಿ ಹೋಬಳಿಗಳಿಗೆ ಸೇರಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಎಂ.ಎಸ್ಸಿ, (ಕೃಷಿ/ ತೋಟಗಾರಿಕೆ/ ಮೀನುಗಾರಿಕೆ/ ಅರಣ್ಯ, ರೇಷ್ಮೆ) ವಿದ್ಯಾರ್ಹತೆ ಹೊಂದಿದ್ದು, ಕನಿಷ್ಟ ೨ ವರ್ಷ ಕೃಷಿ ವಿಸ್ತರಣಾ ಮತ್ತು ಸಂಬAಧಿತ ಚಟುವಟಿಕೆಯಲ್ಲಿ ಅನುಭವ ಮತ್ತು ಎಂಎಸ್ ಆಫಿಸ್ನಲ್ಲಿ ಪರಿಣತಿ ಹೊಂದಿರಬೇಕು. ಗರಿಷ್ಠ ೪೫ ವರ್ಷ, ಗೌರವ ಧನ ರೂ. ೩೦,೦೦೦. ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಬಿ.ಎಸ್ಸಿ/ ಎಂ ಎಸ್ಸಿ (ಕೃಷಿ/ತೋಟಗಾರಿಕೆ/ಮೀನುಗಾರಿಕೆ/ಅರಣ್ಯ ರೇಷ್ಮೆ) ವಿದ್ಯಾರ್ಹತೆ ಹೊಂದಿದ್ದು, ೧ ವರ್ಷ ಕೃಷಿ ವಿಸ್ತರಣಾ ಮತ್ತು ಸಂಬAಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಆಫಿಸ್ನಲ್ಲಿ ಪರಿಣತಿ ಹೊಂದಿರಬೇಕು. ಗರಿಷ್ಠ ೪೫ ವರ್ಷ, ಗೌರವ ಧನ ರೂ. ೨೫,೦೦೦. ಈ ಹುದ್ದೆಗೆ ಅರ್ಹರಿರುವ ಅಭ್ಯರ್ಥಿಗಳು ತಾ. ೩೧ ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರು, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಶಬನಾ ಎಂ. ಶೇಖ್ ತಿಳಿಸಿದ್ದಾರೆ.