ಮಡಿಕೇರಿ, ಮೇ ೨೩ : ಆಂಧ್ರಪ್ರದೇಶ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಶನ್ ಹಾಗೂ ವಿಶಾಖಪಟ್ಟಣಂ ಜಿಲ್ಲಾ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಶನ್ ವತಿಯಿಂದ ವಿಶಾಖಪಟ್ಟಣಂನಲ್ಲಿ ನಡೆದ ೮ನೇ ರಾಷ್ಟಿçÃಯ ಕ್ರೀಡಾ ನೃತ್ಯ ಚಾಂಪಿಯನ್‌ಶಿಪ್ ೨೦೨೨-೨೩ ರಲ್ಲಿ ಜಿಲ್ಲೆಯ ಕೇಡನ ಎಸ್. ಪ್ರಗತಿ ಶಾಸ್ತಿçÃಯ ಒಡಿಸ್ಸಿ ನೃತ್ಯದಲ್ಲಿ ಚಿನ್ನದ ಪದಕ ಪಡೆದು ಅಂತರರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕುಶಾಲನಗರ ನಿವಾಸಿ ಕೇಡನ ಸೋಮಣ್ಣ ಹಾಗೂ ವಿಶಾಲಾಕ್ಷಿ ದಂಪತಿಯ ಪುತ್ರಿಯಾಗಿದ್ದು, ಮೈಸೂರಿನ ಮಾನಸಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್‌ಡಬ್ಲೂö್ಯ ವ್ಯಾಸಂಗ ಮಾಡುತ್ತಿದ್ದಾಳೆ.