ವೀರಾಜಪೇಟೆ, ಮೇ ೨೩: ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮೂಕೊಂಡ ಕಪ್ ಪೈವ್ ಎ ಸೈಡ್ ಫುಟ್ಬಾಲ್ ಪಂದ್ಯಾಟದಲ್ಲಿ ಆತಿಥೇಯ ಮೂಕೊಂಡ, ಮುಕ್ಕಾಟೀರ (ಕುಂಜಿಲಗೇರಿ), ಕೊಲ್ಲೀರ, ಮಂಡೇಡ, ಕಳ್ಳಿಚಂಡ, ಕಲಿಯಂಡ, ಕೋದೇಂಗಡ, ಮನೆಯಪಂಡ ತಂಡಗಳು ಮುನ್ನಡೆ ಸಾಧಿಸಿವೆ.
ಅಡ್ಡೇಂಗಡ ತಂಡ ೨-೦ ಗೋಲುಗಳಿಂದ ಕೀತಿಯಂಡ ತಂಡವನ್ನು ಪರಾಭವಗೊಳಿಸಿತು. ಪೊರಕೊಂಡ ತಂಡ ೧-೦ ಗೋಲಿನಿಂದ ಕಂಗAಡ ತಂಡವನ್ನು ಸೋಲಿಸಿತು. ಆತಿಥೇಯ ಮೂಕೊಂಡ ತಂಡ ಕೊಣಿಯಂಡ ತಂಡವನ್ನು ೧-೦ ಗೋಲಿನಿಂದ ಮಣಿಸಿತು. ಕುಲ್ಲಚಂಡ ತಂಡವು ೩-೦ ಗೋಲುಗಳಿಂದ ಮುಂಡಚಾಡಿರ ತಂಡವನ್ನು ಸೋಲಿಸಿತು. ಮುಕ್ಕಾಟೀರ (ಕುಂಜಿಲಗೇರಿ) ೨-೧ ಗೋಲುಗಳಿಂದ ಕೊಂಡೀರ ತಂಡವನ್ನು ಸೋಲಿಸಿತು. ಕೊಲ್ಲೀರ ತಂಡವು ೫-೦ ಗೋಲಿನಿಂದ ಕೂತಂಡ ತಂಡವನ್ನು ನಿರಾಯಾಸವಾಗಿ ಮಣಿಸಿತು. ಮಂಡೇಡ ತಂಡ ೨-೧ ಗೋಲಿನಿಂದ ಚೌರೀರ ತಂಡವನ್ನು ಟೈ ಬ್ರೇಕರ್ನಲ್ಲಿ ಪರಾಭವಗೊಳಿಸಿತು. ಕಳ್ಳಿಚಂಡ ತಂಡವು ಅಂಜಪರವAಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಕಲಿಯಂಡ ತಂಡವು ಅಡ್ಡೇಂಗಡ ತಂಡವನ್ನು ೧-೦ ಗೋಲಿನಿಂದ ಪರಾಭವಗೊಳಿಸಿತು. ಕೊದೇಂಗಡ ತಂಡ ಕಾಡ್ಯಮಾಡ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಕುಂಜಿಲಗೇರಿ ಮುಕ್ಕಾಟೀರ ತಂಡವು ಕುಲ್ಲಚಂಡ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ಮೂಕೊಂಡ ತಂಡವು ೧-೦ ಗೋಲಿನಿಂದ ಪೊರಕೋಂಡ ತಂಡವನ್ನು ಸೋಲಿಸಿತು. ಮನೆಯಪಂಡ ತಂಡವು ಐಚಂಡ ತಂಡವನ್ನು ೩-೧ ಗೋಲಿನಿಂದ ಟೈ ಬ್ರೇಕರ್ನಲ್ಲಿ ಮಣಿಸಿತು.
ಸಮಾರೋಪ: ಪಂದ್ಯಾಟದ ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭವು ತಾ. ೨೪ರಂದು (ಇಂದು) ಅಪರಾಹ್ನ ೨ ಗಂಟೆಗೆ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಮೂಕೊಂಡ ಕುಟುಂಬದ ಅಧ್ಯಕ್ಷ ರಾಜ ಬೋಪಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಪಾಲೇಕಂಡ ಕುಮಾರ್ ಅಯ್ಯಪ್ಪ, ಮೂಕೊಂಡ ಪಟ್ಟು ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ.