ಕೂಡಿಗೆ, ಮೇ ೨೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯ ತೋಟಗಾರಿಕಾ ಕೃಷಿ ಕ್ಷೇತ್ರದಲ್ಲಿ ಕಳೆದ ಹಿಂದಿನ ೨೦೨೦-೨೧ನೇ ಸಾಲಿನಲ್ಲಿ ಬೆಳೆಸಲಾದ ತೆಂಗಿನಗಿಡಗಳು ರೈತರಿಗೆ ವಿತರಣೆ ಆಗಿ ಬಾಕಿ ಇರುವ ಗಿಡಗಳು ಇದೀಗ ಲಭ್ಯ ಇವೆ ಎಂದು ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ೪ ಸಾವಿರ ತೆಂಗಿನ ಗಿಡಗಳು ಇದ್ದು ಸರಕಾರದ ನಿಯಮಾನುಸಾರವಾಗಿ ರೈತರು ಜಮೀನಿನ ದಾಖಲೆಗಳನ್ನು ನೀಡಿ ಒಂದು ಗಿಡಕ್ಕೆ ೪೦ ರೂಗಳನ್ನು ನೀಡಿ ಪಡೆಯಬಹುದು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.