ಶನಿವಾರಸಂತೆ, ಮೇ ೨೩: ಮಡಿಕೇರಿ ಪ್ರಾದೇಶಿಕ ವಿಭಾಗದ ಶನಿವಾರಸಂತೆ ವಲಯದ ಕಾಜೂರು ಸಸ್ಯ ಕ್ಷೇತ್ರದಲ್ಲಿ ಆರ್‌ಎಸ್‌ಪಿಡಿ ಯೋಜನೆಯಡಿ ಸಬ್ಸಿಡಿ ದರದಲ್ಲಿ ವಿವಿಧ ಜಾತಿಯ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ.

ಶ್ರೀಗಂಧ, ರಕ್ತಚಂದನ, ಸಿಲ್ವರ್, ನೇರಳೆ, ಕಿತ್ತಳೆ, ಹಲಸು, ನುಗ್ಗೆ, ಸೀಬೆ, ಹೊನ್ನೆ, ಬೀಟೆ, ಕೂಳಿ ಇತ್ಯಾದಿ ಸಸಿಗಳು ಇದ್ದು ಸರ್ಕಾರ ನಿಗಧಿ ಪಡಿಸಿದ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ಕೃಷಿಕರು ಶನಿವಾರಸಂತೆ ವಲಯ ಅರಣ್ಯ ಕಚೇರಿಗೆ ತಮ್ಮ ಪಾಸ್‌ಪೋರ್ಟ್ ಅಳತೆಯ ೨ ಫೋಟೋ, ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ ಹಾಗೂ ಸಸಿ ನೆಡುವ ಸ್ಥಳದ ಆರ್.ಟಿ.ಸಿ.ಯನ್ನು ನೀಡಿ ಸಸಿಗಳನ್ನು ಪಡೆಯಬಹುದು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.