ಮಡಿಕೇರಿ, ಮೇ ೨೧: ಧೂಳೆಬ್ಬಿಸುತ್ತ ಒಂದರ ಹಿಂದೆ ಒಂದರAತೆ ಮುನ್ನುಗುತ್ತಿರುವ ಬೈಕ್‌ಗಳು, ಕಡಿದಾದ ರಸ್ತೆಗಳಲ್ಲಿ ಆಗಾಗ್ಗೆ ಸಿಗುವ ತಿರುವುಗಳು, ‘ಆಫ್‌ರೋಡ್’ನಲ್ಲಿ ಬೈರ‍್ಸ್ಗಳ ಸಾಹಸ, ನೋಡುಗರಿಗೆ ರೋಮಾಂಚನ ಅನುಭವ.. ಮಡಿಕೇರಿ ಸಮೀಪದ ದೇವಸ್ತೂರು ಗ್ರಾಮದಲ್ಲಿ ‘ಎಂಆರ್‌ಎಫ್ ರ‍್ಯಾಲಿ ಆಫ್ ಕೂರ್ಗ್’ ದ್ವಿಚಕ್ರ ವಾಹನದ ರಾಷ್ಟಿçÃಯ ಚಾಂಪಿಯನ್‌ಶಿಪ್ ಏಸ್ ಇವೆಂಟ್ಸ್ ನೇತೃತ್ವದಲ್ಲಿ ನಡೆಯಿತು. ೧೦ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಚಂಢೀಗಡ, ಡಾರ್ಜಲಿಂಗ್, ಕುಲುಮಲಾನಿ, ಪುಣೆ, ಕೊಲ್ಕತ್ತ, ಗುವಾಹಟಿ ಇನ್ನಿತರ ಕಡೆಗಳಿಂದ ೧೨೫ ರ‍್ಯಾಲಿ ಪಟುಗಳು ಭಾಗವಹಿಸಿದ್ದರು. ವಿಶೇಷವಾಗಿ ಅಂತರರಾಷ್ಟಿçÃಯ ಮಟ್ಟದ ಪ್ರಾಯೋಜಕತ್ವದಲ್ಲಿ ಸ್ಪರ್ಧಿಸುವ ಬೈರ‍್ಸ್ ಪಾಲ್ಗೊಳ್ಳುವಿಕೆ ಸ್ಪರ್ಧೆಯ ರಂಗನ್ನು ಮತ್ತಷ್ಟು ಹೆಚ್ಚಿಸಿತು.

(ಮೊದಲ ಪುಟದಿಂದ) ಟಿವಿಎಸ್ ರೇಸಿಂಗ್ ತಂಡದ ರಾಜೇಂದ್ರ ಸ್ಯಾಮುಯೆಲ್, ತನ್ವೀರ್ ಅಹಮ್ಮದ್, ಅಂತರರಾಷ್ಟಿçÃಯ ಚಾಂಪಿಯನ್, ಮಹಿಳಾ ರ‍್ಯಾಲಿಪಟು ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಐಶ್ವರ್ಯ ಪಿಸೆ, ಟೀಂ ಹೀರೋ ರೇಸಿಂಗ್ ತಂಡದ ಯುವ, ತನಿಕ, ರಾಷ್ಟಿçÃಯ ಚಾಂಪಿಯನ್‌ಗಳಾದ ನಟರಾಜ್, ಜತೀನ್ ಜೈನ್, ಶರತ್ ಮೋಹನ್, ಸಿನಾನ್, ಸೌರಭ್ ಹಾಂಡ ಸೇರಿದಂತೆ ರ‍್ಯಾಲಿ ಕ್ಷೇತ್ರದ ದಿಗ್ಗಜರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಓಪನ್ ಕ್ಲಾಸ್‌ನಲ್ಲಿ ೮ ಮಂದಿ ಮಹಿಳಾ ರ‍್ಯಾಲಿಪಟುಗಳು ಪಾಲ್ಗೊಂಡು ಗಮನಸೆಳೆದರು.

ದೇವಸ್ತೂರು ವ್ಯಾಪ್ತಿಯಲ್ಲಿ ಕೃತಕವಾಗಿ ಮಾಡಿದ ‘ಡರ್ಟ್ ಟ್ರಾö್ಯಕ್’ನಲ್ಲಿ ಹಲವು ಸುತ್ತುಗಳನ್ನು ಸುತ್ತಿ ೮೦ ಕಿ.ಮೀ. ಅನ್ನು ರೇಸರ್‌ಗಳು ಕ್ರಮಿಸಿದರು. ಕಡಿದಾದ ರಸ್ತೆ, ದುರ್ಗಮ ಹಾದಿ, ಕೃತಕವಾಗಿ ತಯಾರಿಸಿದ ‘ಟ್ರಾö್ಯಕ್’ನಲ್ಲಿ ರೇಸರ್‌ಗಳು ಧೂಳೆಬ್ಬಿಸುತ್ತ ಸವಾರಿ ನಡೆಸುತ್ತಿದ್ದ ದೃಶ್ಯ ಮೈನವಿರೇಳಿಸುತ್ತಿತ್ತು. ಆಧುನಿಕ ಉಪಕರಣದ ಮೂಲಕ ರೇಸರ್‌ಗಳ ಸಮಯವನ್ನು ದಾಖಲಿಸಿಕೊಳ್ಳಲಾಗುತಿತ್ತು. ಅಲ್ಲಲ್ಲಿ ಸ್ಟಾಪ್ ಪಾಯಿಂಟ್‌ಗಳನ್ನು ಮಾಡಲಾಗಿತ್ತು. ಮುಂಜಾಗ್ರತ ಕ್ರಮವಾಗಿ ೫ ಆ್ಯಂಬ್ಯುಲೆನ್ಸ್ ಹಾಗೂ ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಗ್ರಾಮಸ್ಥರು ಸೇರಿದಂತೆ ಬೇರೆಡೆಗಳಿಂದ ಜನರು ಆಗಮಿಸಿ ರೇಸ್ ಕಣ್ತುಂಬಿಕೊAಡರು.

೧ ಗಂಟೆ ೫ ನಿಮಿಷದಲ್ಲಿ ಗುರಿ ಸಾಧನೆ

ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದ್ದ ರ‍್ಯಾಲಿ ಪಟುಗಳ ಪೈಕಿ ಅತೀ ವೇಗವಾಗಿ (೧ ಗಂಟೆ ೫ ನಿಮಿಷ ೩ ಸೆಕೆಂಡ್) ನಿಗದಿತ ಗುರಿ ಮುಟ್ಟಿದ ಟಿವಿಎಸ್ ರೇಸಿಂಗ್ ತಂಡದ ಆರ್.ಇ. ರಾಜೇಂದ್ರ ಗಮನಾರ್ಹ ಸಾಧನೆ ಮಾಡಿದರು.

ಲೇಡಿಸ್ ಕ್ಲಾಸ್‌ನಲ್ಲಿ ‘ಹೀರೋ ಮೋಟೋ ಸ್ಪೋರ್ಟ್ಸ್’ನ ತನಿಕ ಶಾನ್‌ಬಾಗ್ ಪ್ರಾಬಲ್ಯ ಸಾಧಿಸಿ ಹೆಸರಾಂತ ರ‍್ಯಾಲಿಪಟು ಐಶ್ವರ್ಯಾ ಪಿಸೆ ಅವರನ್ನು ಹಿಂದಿಕ್ಕಿದರು. ಆರು ಬಾರಿಯ ರಾಷ್ಟಿçÃಯ ಚಾಂಪಿಯನ್ ಐಶ್ವರ್ಯ ಪಿಸೆ ಪುರುಷ ಬೈಕರ್‌ಗಳೊಂದಿಗೆ ಸಮಾನವಾಗಿ ಸ್ಪರ್ಧಿಸುವ ಮೂಲಕ ಗಮನ ಸೆಳೆದರು.

ಕ್ಲಾಸ್ ೩ ಸೂಪರ್‌ಸ್ಪೋರ್ಟ್ ೧೬೫ ಸಿಸಿ ಗ್ರೂಪ್ ಬಿ ವಿಭಾಗದಲ್ಲಿ ಕೊಡಗು ಜಿಲ್ಲೆಯ ಸ್ಟೀಫನ್ ರಾಯ್ ಪ್ರಥಮ ಸ್ಥಾನ ಪಡೆದು ಮಿಂಚಿದರು.