ಮಡಿಕೇರಿ, ಮೇ ೨೨: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ರಕ್ಷಣೆ ನೀಡಬೇಕು, ಪ್ರವಾಸೋದ್ಯಮ ವ್ಯವಹಾರ ಹಾಳುಗೆಡಹುತ್ತಿರುವ ಏಜೆಂಟರುಗಳನ್ನು, ಕಮಿಷನ್ ಆಮಿಷ ತೋರಿ ಅಲ್ಲಲ್ಲಿ ಮಾರಾಟ ಆಗುತ್ತಿರುವ ಕಳಪೆ ಮಟ್ಟದ ಸಂಬಾರ ಪದಾರ್ಥ, ಜೇನು ತುಪ್ಪದ ನಿಯಂತ್ರಣ, ಟ್ರಾಫಿಕ್ ನಿಯಂತ್ರಣ ಇತ್ಯಾದಿ ತುರ್ತು ಕ್ರಮಕೈಗೊಳ್ಳುವಂತೆ ಇಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಉನ್ನತಾಧಿಕಾರಿಗಳನ್ನು ಭೇಟಿ ನೀಡಿ ಕೊಡಗು ಜಿಲ್ಲಾ ಟೂರಿಜಂ ಕೌನ್ಸಿಲ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಇತ್ತೀಚೆಗೆ ಅಬ್ಬಿಫಾಲ್ಸ್ ಬಳಿ, ಕೊಡಗಿನ ಹೆಸರಿಗೆ ಮಸಿ ಬಳಿಯುವಂತೆ ಪ್ರವಾಸಿಗರ ಮೇಲೆ ಹೀನಾಯ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ವಂತೆಯೂ ಕೌನ್ಸಿಲ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ತಂಡ ಮನವಿ ಮಾಡಿತು.

ಜಿಲ್ಲಾಧಿಕಾರಿ ಡಾ. ಸತೀಶ್ ಅವರು ಈ ಕುರಿತು ಮಾತನಾಡಿ, ಕೂಡಲೇ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಂಬAಧಿಸಿದವರ ಸಭೆ ಕರೆಯುವ ಭರವಸೆ ನೀಡಿದರು.

ಎಸ್ಪಿ ರಾಮರಾಜನ್ ಅವರು ಮನವಿಗೆ ಸ್ಪಂದಿಸಿ, ಅಬ್ಬಿಫಾಲ್ಸ್ ಬಳಿ ನಡೆದ ಗೂಂಡಾಗಿರಿಗೆ ಸಂಬAಧಿಸಿ ಈಗಾಗಲೇ ಮೂವರನ್ನು ಬಂಧಿಸಿರುವುದಾಗಿ ಹೇಳಿದರು. ಪ್ರವಾಸಿಗರ ವಾಹನಗಳನ್ನು ಅಡ್ಡಗಟ್ಟಿ ಅಡಚಣೆ

(ಮೊದಲ ಪುಟದಿಂದ) ಮಾಡುತ್ತಿರುವ ತಂಡಗಳು ಕಾನೂನು ಬಾಹಿರವಾಗಿ ಬಿಳಿ ಫಲಕದ ವಾಹನಗಳನ್ನು ಬಾಡಿಗೆಗೆ ಬಳಸುತ್ತಿರುವುದನ್ನು ತಡೆಯಲಾಗುತ್ತಿದೆ ಎಂದರು. ನಿಯಮ ಬಾಹಿರವಾಗಿ ವಾಹನ ಚಲಾವಣೆ ಮಾಡುತ್ತಿರುವವರಿಂದ ಈಗಾಗಲೇ ಮೂವತ್ತೇಳು ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದು, ಕಾನೂನು ರಕ್ಷಣೆಗೆ ಪೊಲೀಸರು ಸದಾ ಮುಂದಿರುತ್ತೇವೆ ಎಂದು ನುಡಿದರು.

ನಿಯೋಗದಲ್ಲಿ ಕೌನ್ಸಿಲ್ ಕಾರ್ಯಾಧ್ಯಕ್ಷ ಬಿ.ಜಿ. ಅನಂತ ಶಯನ, ಪದಾಧಿಕಾರಿಗಳಾದ ಮೋಂತಿ ಗಣೇಶ್, ಎ.ಕೆ. ನವೀನ್, ಭಾಸ್ಕರ್ ಹಾಗೂ ನಾಸಿರ್ ತೆರಳಿದ್ದರು.