ಸುಂಟಿಕೊಪ್ಪ, ಮೇ ೨೨: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹೋರಿಜಾನ್ ಎಫ್.ಸಿ ಬೆಂಗಳೂರು, ಮತ್ತು ಮೊಗ್ರಾಲ್ ಎಫ್.ಸಿ ಕುಂಬ್ಲೆ ಹಾಗೂ ಬೆಟ್ಟಗೇರಿ ಎಫ್.ಸಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದವು.
ಅಶೋಕ ಎಫ್.ಸಿ ಮೈಸೂರು ಹಾಗೂ ಹೋರಿಜಾನ್ ಎಫ್.ಸಿ ಬೆಂಗಳೂರು, ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಹೋರಿಜಾನ್ ಎಫ್.ಸಿ ಬೆಂಗಳೂರು, ತಂಡದ ಆಟಗಾರ ಹರೀಶ್ ಪಂದ್ಯದ ಮೊದಲಾರ್ಧದಲ್ಲಿ ೧೦ ನಿಮಿಷದಲ್ಲಿ ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ ೧೦ನೇ ನಿಮಿಷದಲ್ಲಿ ಹಾಗೂ ೧೫ನೇ ನಿಮಿಷದಲ್ಲಿ ಬೆಂಗಳೂರು ತಂಡದ ಹರೀಶ್ ಗೋಲು ಗಳಿಸುವ ಮೂಲಕ ೩-೦ ಗೋಲುಗಳಿಂದ ಹೋರಿಜಾನ್ ಎಫ್.ಸಿ ಬೆಂಗಳೂರು, ಗೆಲುವು ಸಾಧಿಸಿತು.
ಎರಡನೇ ಪಂದ್ಯವು ವೈ.ಎಫ್. ಎಫ್.ಸಿ. P.ೆಜಿ.ಎಫ್. ಹಾಗೂ ಮೊಗ್ರಾಲ್ ಎಫ್.ಸಿ ಕುಂಬ್ಲೆ ತಂಡಗಳ ನಡುವೆ ನಡೆದು ಮೊದಲಾರ್ಧದ ೨೯ನೇ ನಿಮಿಷದಲ್ಲಿ ಕುಂಬ್ಲೆ ತಂಡದ ಇಜು (ರಿಯಾಜ್) ಗೋಲು ಗಳಸಿ ತಂಡವನ್ನು ಮುನ್ನಡೆಗೆ ತಂದರು. ಆದರೆ ದ್ವಿತಿಯಾರ್ಧದಲ್ಲಿ P.Éಜಿ.ಎಫ್. ತಂಡದ ಆಟಗಾರ ಪ್ರಭ ಫೆನಾಲ್ಟಿ ಸ್ಟೊçÃಕ್ ಮೂಲಕ ಗೋಲು ಗಳಸಿದರು. ಟ್ರೆöÊ ಬ್ರೇಕರ್‌ನಲ್ಲಿ ೫-೪ ಗೋಲುಗಳಿಂದ ಮೊಗ್ರಾಲ್ ಎಫ್.ಸಿ ಕುಂಬ್ಲೆ ಕ್ವಾರ್ಟರ್ ಫೈನಲಿಗೆ ಪ್ರವೇಶ ಪಡೆಯಿತು. ಮೂರನೇ ಪಂದ್ಯದಲ್ಲಿ ಬೆಟ್ಟಗೇರಿ ಎಫ್.ಸಿ ತಂಡವು ಸುಂಟಿಕೊಪ್ಪ ಬ್ಲೂ ಬಾಯ್ಸ್ ಎಫ್.ಸಿ ತಂಡವನ್ನು ಸೋಲಿಸಿತು. ಮೊದಲಾರ್ಧದಲ್ಲಿ ಬೆಟ್ಟಗೇರಿ ತಂಡದ ಮುನ್ನಡೆ ಆಟಗಾರ ಕೀರ್ತನ್ ೨೪ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಖಾತೆ ತೆರೆದರು. ನಂತರ ನಡೆದ ದ್ವಿತೀಯಾರ್ಧದಲ್ಲಿ ಬೆಟ್ಟಗೇರಿ ತಂಡದ ಸುದೀಪ್ ೨೪ನೇ ನಿಮಿಷದಲ್ಲಿ ಗೋಲು ಹೊಡೆದು ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದರು. ಮುಂದುವರಿದ ಆಟದಲ್ಲಿ ೨೯ನೇ ನಿಮಿಷದಲ್ಲಿ ಇದೇ ತಂಡದ ಹೃತಿಕ್ ಗೋಲು ಹೊಡೆದು ಆ ಮೂಲಕ ಬೆಟ್ಟಗೇರಿ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಿತು. ಈ ಪಂದ್ಯದ ಉದ್ಘಾಟನೆÉಯನ್ನು ಉದ್ಯಮಿ ಇಬ್ರಾಹಿಂ ನೆರವೇರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಆಲಿಕುಟ್ಟಿ, ಮಾಜಿ ಅಧ್ಯಕ್ಷ ಆಧಿಶೇಷ, ಸಂಚಾಲಕ ಟಿ.ಆರ್. ಪ್ರಸನ್ನ, ಕಾರ್ಯದರ್ಶಿ ಪ್ರಶಾಂತ್ (ಕೋಕ) ನಿರ್ದೇಶಕ ಅನಿಲ್ ಕುಮಾರ್ ಇತರರು ಹಾಜರಿದ್ದರು.