ಉಪ್ಪಿಗಿಂತ ರುಚಿಯಿಲ್ಲ-ತಾಯಿಗಿಂತ ಬಂಧುವಿಲ್ಲ

ಉಪ್ಪಿಗಿAತ ರುಚಿಯಿಲ್ಲ - ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತಿನಂತೆ ನನ್ನ ಜೀವನದಲ್ಲಿ ನನಗೆ ಅತ್ಯಂತ ಮುಖ್ಯವಾದ ವ್ಯಕ್ತಿ ಎಂದರೆ ನನ್ನ ಅಮ್ಮ. ನಾನು ಈ ಜಗತ್ತನ್ನು ನೋಡಿದ್ದೇನೆ. ಈ ಜಗತ್ತಿನಲ್ಲಿ ಹುಟ್ಟಿರುವುದೇ ನನ್ನ ಅಮ್ಮನಿಂದ. ಆದ್ದರಿಂದ ಅಮ್ಮನ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಮಾತೃತ್ವವು ಪದಗಳಲ್ಲಿ ವಿವರಿಸಲಾಗದ ಸಂಬAಧವಾಗಿದೆ. ಅಮ್ಮ ನನಗೆ ಜನ್ಮ ನೀಡುವುದರೊಂದಿಗೆ ನನ್ನ ಪೋಷಣೆಯನ್ನೂ ನೋಡಿಕೊಂಡಿರುತ್ತಾರೆ. ಅಮ್ಮನ ಈ ಸಂಬAಧಕ್ಕೆ ಪ್ರಪಂಚದಲ್ಲಿ ಅತ್ಯುನ್ನತ ಗೌರವವನ್ನು ನೀಡಲಾಗುತ್ತದೆ. ಭಾರತ ಮಾತೆ, ಭೂಮಾತೆ, ಮಾತೃಭೂಮಿ, ಪ್ರಕೃತಿ ಮಾತೆ ಇತ್ಯಾದಿ ಪ್ರಪಂಚದ ಜೀವ ನೀಡುವ ಮತ್ತು ಗೌರವಾನ್ವಿತ ವಸ್ತುಗಳಿಗೆ ಅಮ್ಮನ ಹೆಸರನ್ನು ಇಡಲು ಅಮ್ಮ ಮತ್ತು ಮಕ್ಕಳ ಸಂಬAಧವೇ ಕಾರಣವಾಗಿದೆ. ದೇವರು ಎಲ್ಲೆಡೆ ಇರಲಾರನೆಂದು ಭೂಮಿಯಲ್ಲಿ ಅಮ್ಮನನ್ನು ಸೃಷ್ಟಿಸಿದರು ಎಂಬ ಮಾತು ನನ್ನ ಪಾಲಿಗೆ ನಿಜಕ್ಕೂ ಸತ್ಯವಾಗಿದೆ.

ನನ್ನ ಪಾಲಿನ ಆತ್ಮೀಯ ಸ್ನೇಹಿತೆ ನನ್ನ ಅಮ್ಮ. ನಾನು ಮತ್ತು ಅಮ್ಮ ನಮ್ಮಿಬ್ಬರ ಹುಟ್ಟುಹಬ್ಬವನ್ನು ಒಂದೇ ದಿನ ಅತ್ಯಂತ ಖುಷಿಯಿಂದ ಆಚರಿಸುತ್ತೇವೆ. ನಾನು ತಪ್ಪು ಮಾಡಿದಾಗ ಅಮ್ಮ ನನ್ನನ್ನು ಗದರಿಸಿ, ಬೈದು ಹೊಡೆಯುತ್ತಾರೆ. ಸ್ವಲ್ಪ ಸಮಯದ ನಂತರ ನನಗೆ ಪ್ರೀತಿಯಿಂದ ತಿಳಿಹೇಳುತ್ತಾರೆ. ಆಗ ನನಗೆ ನನ್ನ ತಪ್ಪಿನ ಅರಿವಾಗುತ್ತದೆ. ನನ್ನ ಮನಸ್ಸಿಗೆ ನೋವಾಗಿದೆ ಎಂದಾದ ತಕ್ಷಣ ನನ್ನ ಬಾಡಿದ ಮುಖದಲ್ಲಿ ನಗು ತರಿಸುತ್ತಾರೆ. ಅಮ್ಮ ಮತ್ತು ನನ್ನ ನಡುವೆ ವಿಶೇಷ ಬಾಂಧವ್ಯವಿದೆ. ಅಮ್ಮ ನನ್ನ ಎಲ್ಲಾ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ನನಗೆ ಬೇಕಾದ ಅಗತ್ಯ ವಸ್ತುಗಳನ್ನು ನಾನು ಕೇಳುವುದರ ಮುಂಚೆಯೇ ನನ್ನ ಮುಂದೆ ತಂದಿಡುತ್ತಾರೆ. ನನ್ನ ಜೀವನದ ಅತಿ ದೊಡ್ಡ ಆಸೆ ಎಂದರೆ ನನ್ನ ಜೀವನದ ಎಲ್ಲಾ ಸುಖ ದುಃಖಗಳಲ್ಲಿ ನನ್ನ ಅಮ್ಮ ನನ್ನ ಜೊತೆಗಿರಬೇಕು. ನನ್ನ ಅಮ್ಮನ ನಗುಮುಖ ಮತ್ತು ಧೈರ್ಯ ತುಂಬುವ ಮಾತುಗಳು ನನ್ನ ಎಲ್ಲಾ ಒತ್ತಡಗಳನ್ನು ತೊಡೆದು ಹಾಕಿರುವ ಎಷ್ಟೋ ಉದಾಹರಣೆಗಳಿಗೆ. ನನ್ನ ಅಮ್ಮ ನನಗೆ ದೇವರು ಕೊಟ್ಟ ಅತೀ ದೊಡ್ಡ ಉಡುಗೊರೆ. ನನ್ನ ಕಣ್ಣಿಗೆ ಕಾಣೋ ದೇವರೇ ನನ್ನ ಅಮ್ಮ. ಜೀವನದ ಶಾಲೆಯಲ್ಲಿ ಶಿಕ್ಷಕಿ ನನ್ನ ಅಮ್ಮ. ಅಮ್ಮನ ಆಲೋಚನೆ ಬಂದ ತಕ್ಷಣ ಹೃದಯವು ಪ್ರೀತಿಯ ಸಾಗರದಲ್ಲಿ ಮುಳುಗಲು ಪ್ರಾರಂಭಿಸುತ್ತದೆ. ನನ್ನನ್ನು ಹೆತ್ತು, ಹೊತ್ತು, ಸಾಕಿ, ಬೆಳೆಸುತ್ತಿರುವ ನನ್ನ ಪ್ರೀತಿಯ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ನನ್ನ ಗುರಿಯಾಗಿದೆ. ನನ್ನ ಅಮ್ಮ ನನ್ನಲ್ಲಿ ಕಂಡ ಅನೇಕ ಕನಸುಗಳನ್ನು ಈಡೇರಿಸುವ ಸಲುವಾಗಿ ನಾನು ನನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಬಹಳ ಶ್ರದ್ಧೆಯಿಂದ ಮಾಡುತ್ತೇನೆ. ಇನ್ನು ಹೇಳುತ್ತಾ ಹೋದರೆ ಅಮ್ಮನ ಬಗ್ಗೆ ಹೇಳಲು ನನಗೆ ಈ ಜನ್ಮವೇ ಸಾಲದು.

- ಎಂ.ಬಿ. ತೀರ್ಥಪ್ರಿಯ, ೭ನೇ ತರಗತಿ, ಜವಾಹರ ನವೋದಯ ವಿದ್ಯಾಲಯ, ಗಾಳಿಬೀಡು. ಮೊ. ೮೯೭೧೬೪೨೫೧೦.ನಮ್ಮ ಕುಟುಂಬದ ಕಣ್ಣು

ಅಮ್ಮ ನಮ್ಮ ಕುಟುಂಬದ ಕಣ್ಣು. ಹೆತ್ತಲ್ಲಿಂದ ಬೆಳೆಸಿ ದೊಡ್ಡವರನ್ನಾಗಿ ಮಾಡುವುದು ಅಮ್ಮ. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬುದೊAದು ಭಾರತೀಯ ಸಂಸ್ಕೃತಿಯ ವೇದ ವಾಕ್ಯ. ತಾಯಿಯೇ ದೇವರು, ಕಣ್ಣಿಗೆ ಕಾಣುವ ದೇವರು. ಮೇ ೧೪ ರಂದು ಅಮ್ಮಂದಿರ ದಿನ ಆಚರಿಸಲಾಗುತ್ತದೆ. ಅಂದು ಮಕ್ಕಳು ತಾಯಿಯನ್ನು ಮನದಲ್ಲೇ ಸ್ಮರಿಸುತ್ತಾರೆ. ಹಿರಣ್ಯ ಕಶಿಪು ಯುದ್ಧಕ್ಕೆ ನಿಂತಾಗ ಗರ್ಭಿಣಿಯಾದ ಆತನ ಪತ್ನಿ ನಾರದರು ದೇವ ಲೋಕಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ನಾರಾಯಣನು ಮಹಿಳೆಯನ್ನು ಹಾಡಿ ಹೊಗಳುತ್ತಿದ್ದರು. ಈ ಪ್ರಭಾವದಿಂದಲೇ ಹೊಟ್ಟೆಯೊಳಗಿದ್ದ ಪ್ರಹ್ಲಾದ ಚಿಕ್ಕ ವಯಸ್ಸಿನಲ್ಲಿ ನಾರಾಯಣನ ಭಕ್ತನಾದನೆಂಬುದು ಪುರಾಣ ಕಥೆ. ಇದು ಮಗುವಿನ ಮೇಲೆ ತಾಯಿಯ ಪ್ರಭಾವದ ಬಗ್ಗೆ ಒಂದು ಉದಾಹರಣೆ. ತನ್ನ ಮಗುವಿನ ಭವಿಷ್ಯದ ಬಗ್ಗೆ ಉತ್ತಮ ಕನಸನ್ನು ಹೊಂದಿರುವವಳು ತಾಯಿ. ಮಗು ತನ್ನ ತಾಯಿಯ ಬೆಚ್ಚನೆಯ ಮಡಿಲಲ್ಲಿ ಮಲಗಿ ಹಾಲು ಕುಡಿಯುತ್ತಾ ಬೆಳೆಯುತ್ತದೆ. ಅಲ್ಲಿಂದಲೇ ಮಗುವಿಗೆ ತನ್ನ ತಾಯಿಯ ಬಗ್ಗೆ ಪ್ರೀತಿ, ನಂಬಿಕೆ, ಸೆಳೆತ ಮೊದಲಾದವು ಪ್ರಾರಂಭವಾಗಿ ಮುಂದುವರಿಯುವುದು. ಮಗು ತನ್ನ ವ್ಯಕ್ತಿತ್ವ ಅಭಿವೃದ್ಧಿ ಪಡಿಸಿಕೊಳ್ಳುವುದು.

ತಾಯಿ ತಂದೆ ತೋರುವ ಪ್ರೀತಿ ಆರೈಕೆಗಳ ಮೇಲೆಯೆ. ಮಗು ಚಿಕ್ಕ ವಯಸ್ಸಿನಲ್ಲಿದ್ದಾಗ ತಂದೆ ಹೆಚ್ಚಿನ ಸಮಯ ಮನೆಯ ಹೊರಗೆ ಕಳೆಯುತ್ತಾನೆ. ಆಗ ಮಗುವಿಗೆ ಹತ್ತಿರವಾಗುವವಳು ತಾಯಿಯೇ. ಮಗುವಿನ ಬೇಕು, ಬೇಡಗಳು, ಅದರ ಚಲನವಲನ, ಚಟುವಟಿಕೆ, ಓದು-ಬರಹ ಮೊದಲಾದವುಗಳಲ್ಲಿ ಭಾಗವಹಿಸವವಳು. ಅದಕ್ಕೆ ಹೆಚ್ಚಿನ ಬೆಂಬಲ ನೀಡುವವಳು ಮಾತೃಹೃದಯಿ ತಾಯಿಯೇ. ಅನೇಕ ನಗರ ಪ್ರದೇಶಗಳಲ್ಲಿ ತಂದೆ ತಾಯಂದಿರಿಬ್ಬರೂ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಗುವಿಗೆ ಹತ್ತಿರವಾಗಿ ಅದರ ಜೊತೆ ಬೆರೆತು ಅದಕ್ಕೆ ಪ್ರೀತಿಯನ್ನು ಧಾರೆ ಎರೆಯಬೇಕಿದೆ. ಮಗುವಿನ ಉತ್ತಮ ಭವಿಷ್ಯ ರೂಪಿಸುವವರು ತಂದೆ ತಾಯಂದಿರೇ ಅವರ ವ್ಯಕ್ತಿತ್ವ ಗುಣನಡತೆ, ಮನೋಧೈರ್ಯ, ಉತ್ತಮ ಹವ್ಯಾಸಗಳು ಮಗುವಿನ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಆತನ ಬಾಲ್ಯದ ದಿನಗಳ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಆತ ಬೆಳೆದು ಬಂದಿರುವ ವಾತಾವರಣದ ಮೇಲೆ ರೂಪಿತವಾಗುತ್ತದೆ. ಆದ್ದರಿಂದ ಮಗುವಿನ ಬಾಲ್ಯದಲ್ಲಿ ಉತ್ತಮ ಪರಿಸರ ಕಲ್ಪಿಸಿಕೊಡುವುದು ತಂದೆ ತಾಯಿಯ ಕರ್ತವ್ಯವಾಗಿದೆ. ಸಾಧನೆ ಮಾಡಿದ ಮಕ್ಕಳ ಹಿಂದೆ ತಂದೆ ತಾಯಂದಿರ ಪ್ರೋತ್ಸಾಹ, ಬೆಂಬಲ ಅಗಾಧವಾಗಿರುತ್ತದೆ. ಮಗುವಿನ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಿ ಅದಕ್ಕಾಗಿ ತನ್ನ ಜೀವನವಿಡಿ ಕಷ್ಟಪಟ್ಟು ಅದನ್ನು ನನಸು ಮಾಡುವವಳು ತಾಯಿಯೇ. ಆದ್ದರಿಂದಲೇ ನಮ್ಮ ಸಮಾಜದಲ್ಲಿ ತಾಯಿಗೆ ಪೂಜ್ಯಸ್ಥಾನ ನೀಡಿರುವುದು. ಯಶಸ್ವಿ ತಾಯಿಯಾಗಬೇಕಾದರೆ ಮಗು ಗಂಡು ಅಥವಾ ಹೆಣ್ಣಾಗಿರಲಿ ಅವರನ್ನು ಸಮಾನ ಮನೋಭಾವದಿಂದ ಕಾಣಬೇಕು. ವಿಶ್ವದಾದ್ಯಂತ ಜನರು ಪ್ರೀತಿ, ಕೃತಜ್ಞತೆಯನ್ನು ತಾಯಂದಿರಿಗೆ ಅರ್ಪಿಸುತ್ತಾರೆ.

- ಎ.ಸಿ. ಅಶ್ವಿತ, ೮ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ. ಮೊ. ೯೭೩೧೭೧೭೭೧೮.ಸಹನಾಮಯಿ ಅಮ್ಮ

ನನ್ನ ಅಮ್ಮ ಎಂದರೆ ನನಗೆ ತುಂಬಾ ಪ್ರೀತಿ. ನನ್ನ ಅಮ್ಮ ನನ್ನನ್ನು ತುಂಬಾ ಇಷ್ಟಪಡುತ್ತಾರೆ. ಅಮ್ಮ ನನಗೆ ಓದಲು ಬರೆಯಲು ಸಹಾಯ ಮಾಡುತ್ತಾರೆ.

ಅಮ್ಮ ಮಗುವಿನ ಮೊದಲ ನುಡಿ. ಅಮ್ಮ ನನಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿ ನನಗೆ ಊಟ ಮಾಡಿ ಬಡಿಸುತ್ತಾಳೆ. ನನಗೆ ಹಷಾರು ತಪ್ಪಿದಾಗ ನನ್ನನ್ನು ಮಗುವಿನಂತೆ ಸಂತೈಸುತ್ತಾಳೆ. ಅಮ್ಮ ಎಂದರೆ ನನಗೆ ತುಂಬಾ ಇಷ್ಟ. ನನ್ನ ಹುಟ್ಟುಹಬ್ಬದ ದಿನ ನನ್ನ ಅಮ್ಮ ನನಗೆ ಇಷ್ಟವಾದ ವಸ್ತುಗಳನ್ನೆಲ್ಲ ಕೊಡಿಸುತ್ತಾಳೆ. ನನಗೆ ಸೈಕಲ್ ಹೊಡೆಯುವುದನ್ನು ನನ್ನ ಅಮ್ಮ ಜೊತೆಗೆ ನಿಂತು ಹೇಳಿಕೊಟ್ಟಳು. ನನಗೆ ಪರೀಕ್ಷೆಯ ಸಮಯದಲ್ಲಿ ಪ್ರೀತಿಯಿಂದ ಜೊತೆಗೆ ಕೂತು ನನಗೆ ಹೇಳಿಕೊಡುತ್ತಾಳೆ.

ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ಮೂಲ ಕಾರಣ. ಅಮ್ಮನ ಪ್ರೀತಿ ಗಿಂತ ದೊಡ್ಡ ಪ್ರೀತಿಯಿಲ್ಲ. ಅಮ್ಮ ನನ್ನನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ನನ್ನ ಅಮ್ಮ ಪ್ರೀತಿ, ಸಹನೆಯಿಂದ ಬದುಕಿನ ಪಾಠ ಕಲಿಸಿದ ದೇವತೆ. ಜಗತ್ತಿನಲ್ಲಿ ಬೇರೆ ಯಾರು ಕೊಡಲಾರರು ತಾಯಿಯ ಮಮತೆಯ ಪ್ರೀತಿಯನ್ನು. ನನ್ನ ಅಮ್ಮನೇ ಮೊದಲ ಗುರು.

- ಎಂ.ಪಿ. ಮಧುರ, ೮ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ

(ಮುಗಿಯಿತು)