ಮಡಿಕೇರಿ, ಮೇ ೨೧: ಕಂದಾಯ ಪಾವತಿಸುವ ವೇಳೆ ಸಾರ್ವಜನಿಕರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ವೀರಾಜಪೇಟೆ ಪುರಸಭೆಯಲ್ಲಿ ಈ ರೀತಿ ಕೆಲ ಸಿಬ್ಬಂದಿಗಳು ಹಣ ಪಡೆಯುತ್ತಿರುವುದಾಗಿ ತಾ. ೧೫ ರ ‘ಶಕ್ತಿ’ಯ ‘ನಿಮ್ಮಪತ್ರ’ ವಿಭಾಗದಲ್ಲಿ ನಾಗರಿಕರ ಅಭಿಪ್ರಾಯವಿದ್ದು, ಹೆಚ್ಚುವರಿ ಹಣ ಪಡೆಯುವ ಘಟನೆ ಮರುಕಳಿಸಿದಲ್ಲಿ ನೇರವಾಗಿ ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡುವಂತೆ ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.