ಸುಂಟಿಕೊಪ್ಪ,, ಮೇ ೨೧: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾನುವಾರ ನಡೆದ ಮೊದಲ ಪಂದ್ಯಾಟದಲ್ಲಿ ೪-೨ ಗೋಲುಗಳಿಂದ ಪಾರ್ಥ ಎಫ್.ಸಿ. ಒಂಟಿಯAಗಡಿ ತಂಡವು ಶೀತಲ್ ಎಫ್.ಸಿ ಮೈಸೂರು ತಂಡವನ್ನು ಮಣಿಸಿತು.
ಟ್ರೆöÊಬ್ರೇಕರ್‌ನಲ್ಲಿ ಕಿರಣ್, ಡೀಕು, ನಾಸಿಫ್, ಜಿನ್ಸಿತ್ ಗೋಲು ಗಳಿಸುವ ಮೂಲಕ ೪-೨ ಗೋಲುಗಳಿಂದ ಪಾರ್ಥ ಎಫ್.ಸಿ ಒಂಟಿಯAಗಡಿ ತಂಡ ಜಯಗಳಿಸಿತು. ಎರಡನೇ ಪಂದ್ಯವು ಸ್ವರ್ಣ ಎಫ್.ಸಿ ಮಂಡ್ಯ ಹಾಗೂ ವೈ.ಎಫ್. ಎಫ್.ಸಿ P.ೆಜಿ.ಎಫ್. ತಂಡಗಳ ನಡುವೆ ನಡೆದು ದ್ವಿತೀಯಾರ್ಧದ ಕೊನೆಯ ಕ್ಷಣದಲ್ಲಿ P.Éಜಿ.ಎಫ್. ತಂಡದ ಮುನ್ನಡೆ ಆಟಗಾರ ಶಶಿ ಒಂದು ಗೋಲು ಗಳಿಸಿದ್ದರಿಂದ ಏಕೈಕ ಗೋಲಿನಿಂದ ಕೆಜಿಎಫ್ ತಂಡ ಜಯಗಳಿಸಿತು. ಮೂರನೇ ಪಂದ್ಯವನ್ನು ಮಳೆಯಿಂದಾಗಿ ಮುಂದೂಡಲಾಯಿತು.