ಗೋಣಿಕೊಪ್ಪ ವರದಿ, ಮೇ ೨೧: ಮಾಯಮುಡಿ ಗ್ರಾಮದ ಬೋಡ್‌ನಮ್ಮೆಯು ಗುರುವಾರ ಕುದುರೆ ಹಬ್ಬ ಆಚರಣೆಯೊಂದಿಗೆ ಸಂಪನ್ನಗೊAಡಿತು.

ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರ ಕಾಡಿನಲ್ಲಿರುವ ಮಾನಿಲ್ ದೈವನೆಲೆಯಲ್ಲಿ ನಾಪರೆ ತಾತುವೊ ಆಚರಣೆಯೊಂದಿಗೆ ಶನಿವಾರ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ನಂತರ ಮೂರು ದಿನ ಅಂಬಲದಲ್ಲಿ ದೇವರ ಡೋಲು ಬಡಿದು ಪ್ರಾರ್ಥಿಸಲಾಯಿತು. ಬುಧವಾರ ಮಧ್ಯಾಹ್ನ ಭಂಡಾರ ಹೊತ್ತು ಮಾನಿಲ್ ಅಯ್ಯಪ್ಪ ದೈವನೆಲೆಯಲ್ಲಿ ಪೂಜೆ ಸಲ್ಲಿಸಲಾಯಿತು. ಭಕ್ತರು ಪಟ್ಟಣಿ ಆಚರಣೆ ನಡೆಸಿದರು. ರಾತ್ರಿ ಮನೆ ಮನೆಗೆ ತೆರಳಿ ಕಳಿ ಆಡುವೊ ಆಚರಣೆ ಮಾಡಲಾಯಿತು. ಗುರುವಾರ ಕುದುರೆ ಹೊತ್ತು, ಮಾನಿಲ್ ಅಯ್ಯಪ್ಪ ದೈವ ನೆಲೆಯಲ್ಲಿ ಕುದುರೆ ಆಚರಣೆಯೊಂದಿಗೆ ತೆರೆ ಎಳೆಯಲಾಯಿತು.