ಮಡಿಕೇರಿ, ಮೇ ೨೧: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇದೊಂದು ಅಪರೂಪದ ಕಾರ್ಯಕ್ರಮ ಬಹುತೇಕ ಕಾರ್ಯಕ್ರಮಗಳಿಗೆ ಮಡಿಕೇರಿ ಯಲ್ಲಿರುವ ಕೊಡವ ಜನಾಂಗದವರು ಪಾಲ್ಗೊಳ್ಳುವುದು ವಿರಳ ಎಂಬ ಮಾತಿದ್ದು, ಇದು ನಿಜವೂ ಹೌದು. ಆದರೆ ಶನಿವಾರದಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಕೊಡವ ಯುವ ಮೇಳ ಎಂಬ ಪರಿಕಲ್ಪನೆಯ ಚೊಚ್ಚಲ ಕಾರ್ಯಕ್ರಮ ವೈವಿಧ್ಯಮಯ ರೀತಿಯಲ್ಲಿ ಯಶಸ್ಸು ಕಂಡಿತು.
ಹಲವು ಸಮಯಗಳ ಹಿಂದಿನಿAದಲೇ ನಡೆದ ಪ್ರಯತ್ನದ ಫಲವಾಗಿ ಸರಿಸುಮಾರು ಮೂರುವರೆ-ನಾಲ್ಕು ಸಾವಿರದಷ್ಟು ಮಂದಿ ಕೊಡವ ಜನಾಂಗದವರು ಪಾಲ್ಗೊಂಡಿದ್ದೇ ಒಂದು ವಿಶೇಷವಾಗಿತ್ತು. ಜನಾಂಗದಲ್ಲಿನ ಮೇರು ವ್ಯಕ್ತಿಗಳ ಪರಿಚಯ - ಸಾಂಸ್ಕೃತಿಕತೆಯನ್ನು ಪ್ರತಿ ಬಿಂಬಿಸುವAತಹ ಚಿತ್ರಣದ ಮೆರವಣಿಗೆ ಹೊಸ ಖಾಸಗಿ ಬಸ್ ನಿಲ್ದಾಣ-ಎಸ್.ಬಿ.ಐ.-ಚೌಕಿ-ಹಳೆಯ ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಸುದರ್ಶನ ವೃತ್ತದ ತನಕ ನಡೆದು ಕಾರ್ಯಕ್ರಮ ಆಯೋಜಿತವಾಗಿದ್ದ ಕ್ರಿಸ್ಟಲ್ ಕೋರ್ಟ್ನಲ್ಲಿ ಸಮಾಪನ ಗೊಂಡಿತು. ಸುಮಾರು ಎರಡೂವರೆ ಯಿಂದ ಮೂರು ಕಿ.ಮೀ. ಉದ್ದದ ಮೆರವಣಿಗೆ ನಡೆದಿದ್ದು ಬಹುಶಃ ಇದೇ ಪ್ರಥಮ. ಜಿಲ್ಲೆಯ ವಿವಿಧೆಡೆಗಳಿಂದ ಸೇರಿದಂತೆ ಬೆಂಗಳೂರು, ಮೈಸೂರು, ಮಂಗಳೂರು ಮತ್ತಿತರ ಕಡೆಗಳಿಂದಲೂ ವಿಶೇಷ ವಾಹನಗಳಲ್ಲಿ ಯುವಜನರು ಆಗಮಿಸಿದ್ದರೆ ಜಿಲ್ಲೆ-ನಗರದ ಹಿರಿಯರು ಉತ್ಸುಕತೆಯಲ್ಲಿ ಭಾಗಿಗಳಾಗಿದ್ದರು.
ಚದುರಿಹೋದಂತಿರುವ ಯುವ ಜನಾಂಗದವರನ್ನು ತವರು ಜಿಲ್ಲೆಯತ್ತ ಸೆಳೆಯುವುದು, ಇಲ್ಲಿನ ಮಣ್ಣಿನೊಂದಿಗಿರುವ ಅವಿನಾಭಾವ ಸಂಬAಧವನ್ನು ಹಾಗೂ ಇದರೊಂದಿಗೆ ಮಿಳಿತವಾಗಿರುವ ಕೊಡವ ಸಂಸ್ಕೃತಿ-ಪರAಪರೆಯ ಮಹತ್ವವನ್ನು ಪರಿಚಯಿಸಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಪ್ರಥಮ ಯುವ ಮೇಳದ ಯಶಸ್ಸು ಇದೀಗ ಮುಂದಿನ ಕಾರ್ಯ ಯೋಜನೆಗಳಿಗೂ ಪ್ರೇರಣೆ ನೀಡಿದಂತಾಗಿದೆ.
ಬಹುತೇಕವಾಗಿ ಮರೆ ಯಾಗುತ್ತಿರುವ ಆತಂಕವಿರುವ ಸಂಸ್ಕೃತಿ, ಆಚಾರ-ವಿಚಾರಗಳನ್ನು, ಪದ್ಧತಿ-ಪರಂಪರೆಗಳನ್ನು ಪ್ರತಿಬಿಂಬಿಸಿ ಈ ಬಗ್ಗೆ ಯುವ ಜನಾಂಗದಲ್ಲಿ ಆಸಕ್ತಿ ಮೂಡಿಸಲು ಆಯೋಜಕರು ಹೆಚ್ಚಿನ ಒತ್ತು ನೀಡಿದ್ದರು. ನಡು-ನಡುವೆ ಹಾಡು, ನೃತ್ಯವನ್ನು ಒಳಗೊಂಡ ಸಾಂಸ್ಕೃತಿಕ ಕಲರವದೊಂದಿಗೆ ನಾಟಕದ ಮೂಲಕ ಜಾಗೃತಿ ಮೂಡಿಸುವ ಯತ್ನವೂ ಸಫಲತೆ ಕಂಡAತಿತ್ತು. ರ‍್ಯಾಂಪ್‌ವಾಕ್ ಅಂದರೆ ಸಹಜವಾಗಿ ಎಲ್ಲರಿಗೆ ಈಗಿನ ಆಧುನಿಕತೆಯ ಸನ್ನಿವೇಶ ಮನಸ್ಸಿಗೆ ಬರುತ್ತದೆ. ಆದರೆ ಇಲ್ಲಿ ಕೊಡವ ಜನಾಂಗದಲ್ಲಿ ಹುಟ್ಟಿನಿಂದ ಸಾವಿನ ತನಕದ ಪದ್ಧತಿ, ಆಚರಣೆಗಳು ಈ ಹಿಂದಿನ ಕಾಲದ ಬದುಕಿನ ಚಿತ್ರಣ, ಕೃಷಿ ಚಟುವಟಿಕೆ, ಬೇಟೆ, ಪರಂಪರೆ ನಂತರದ ಬದಲಾವಣೆಗಳು, ಈಗಿನ ವಾಸ್ತವತೆಯನ್ನು ಪ್ರದರ್ಶಿಸುವು ದರೊಂದಿಗೆ ಪುರಾತನ ಸಂಸ್ಕೃತಿಗೆ ನೀಡಬೇಕಾದ ಒತ್ತು, ಆಗಬೇಕಾಗಿರುವ ಬದಲಾವಣೆಗಳನ್ನು ಎತ್ತಿತೋರುವ ರೀತಿಯ ವಿಶಿಷ್ಟ ಪ್ರಯತ್ನದ ರ‍್ಯಾಂಪ್‌ವಾಕ್ ನೆರೆದಿದ್ದವರ ಮನಮುಟ್ಟುವಂತೆ ಮೂಡಿತ್ತು. ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಜನಾಂಗದ ಯುವ ಸಾಧಕರ ಪರಿಚಯ - ಅವರಿಂದ ಉತ್ತೇಜನಕಾರಿ ಯಾದಂತಹ ಹಿತನುಡಿಗಳು ಗಮನ ಸೆಳೆದವು. ಒಟ್ಟಿನಲ್ಲಿ ಕೊಡವಾಮೆಲ್ - ಪಳೆಯಾಮೆ ಎಂಬ ದೂರದೃಷ್ಟಿಯ ಈ ಯುವ ಮೇಳದಲ್ಲಿ ಕಂಡುಬAದ ಎಲ್ಲರ ತೊಡಗಿಸಿಕೊಳ್ಳುವಿಕೆ ಮುಂದಿನ ದಿನಗಳಲ್ಲಿ ಒಂದಷ್ಟು ಪರಿಣಾಮ ಬೀರಲಿದೆ ಎಂಬ ಭಾವನೆಯನ್ನು ನೆರೆದಿದ್ದವರಲ್ಲಿ ಮೂಡಿಸುವಲ್ಲಿ ಯಶಸ್ಸು ಕಂಡಿದ್ದು ಪ್ರಥಮ ಕೊಡವ ಯುವ ಮೇಳದ ಸಾಧನೆಯಾಗಿದೆ.
ಜಬ್ಬೂಮಿ (ಜನ್ಮಭೂಮಿ) ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಚಾರಿಟೇಬಲ್ ಟ್ರಸ್ಟ್ನ ಚೊಚ್ಚಲ ಪ್ರಯತ್ನದಲ್ಲಿ ಹಲವಷ್ಟು ಮಂದಿಯ ಶ್ರಮವಿದೆ. ಇದಕ್ಕೆ ಪೂರಕವಾಗಿ ವಿವಿಧ ಕೊಡವ ಸಮಾಜಗಳು, ಕೊಡವ ಕೇರಿಗಳು, ಇನ್ನಿತರ ಕೊಡವ ಸಂಘಟನೆಗಳು, ಹಿರಿಯರು, ಕಿರಿಯರೆನ್ನದೆ ಬೆಂಬಲ ನೀಡಿದ್ದೂ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಟ್ರಸ್ಟ್ನ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ.
- ಕಾಯಪಂಡ ಶಶಿ ಸೋಮಯ್ಯ.