ಜೆಡಿಎಸ್ ಬೆಂಬಲ: ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಮೇ ೨೦: ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಕ್ಕೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಶುಭ ಹಾರೈಸಿದ್ದು, ರಾಜ್ಯದ ಜನತೆಗೆ ಅರ್ಪಣಾ ಮನೋಭಾವದಿಂದ ಅವರೆಲ್ಲರೂ ಸೇವೆ ಮಾಡಲಿ. ಕನ್ನಡನಾಡಿನ ಜನಹಿತಕ್ಕಾಗಿ ಕಾಂಗ್ರೆಸ್ ಸರಕಾರ ಕೈಗೊಳ್ಳುವ ಪ್ರತಿಯೊಂದು ಕ್ರಮಕ್ಕೂ ಜೆಡಿಎಸ್ ಪಕ್ಷ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುಕೋರನ ಹತ್ಯೆ
ಶ್ರೀನಗರ, ಮೇ ೨೦: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೆ ಪಾಕಿಸ್ತಾನದಿಂದ ಒಳನುಸುಳುಕೋರನನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನುಸುಳುಕೋರನು ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಮೆಂಧಾರ್ ಉಪ ವಿಭಾಗದ ಬಾಲಾಕೋಟ್ ಸೆಕ್ಟರ್ನಲ್ಲಿ ಕಾವಲು ಕಾಯುತ್ತಿದ್ದ ಪಡೆಗಳಿಂದ ಹೊಡೆದುರುಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಳನುಗ್ಗುವವನಿಗೆ ಅಧಿಕಾರಿಗಳು ಎಚ್ಚರಿಸಿದರೂ ಗಮನ ನೀಡಲಿಲ್ಲ. ಆಗ ಭದ್ರತಾ ಪಡೆ ಯೋಧರು ಗುಂಡು ಹಾರಿಸಿದಾಗ ಪಲಾಯನ ಮಾಡಲು ಪ್ರಯತ್ನಿಸುವಾಗ ಗುಂಡೇಟಿಗೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ ಪ್ರದೇಶವನ್ನು ಸುತ್ತುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ೧೫ ಸ್ಥಳಗಳಲ್ಲಿ ಎನ್ಐಎ ದಾಳಿ
ನವದೆಹಲಿ, ಮೇ ೨೦: ೨೦೨೧ ಮತ್ತು ೨೦೨೨ ರಲ್ಲಿ ರಾಷ್ಟಿçÃಯ ತನಿಖಾ ದಳ ದಾಖಲಿಸಿದ ಎರಡು ಪ್ರಕರಣಗಳಿಗೆ ಸಂಬAಧಿಸಿದAತೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಪುಲ್ವಾಮಾ, ಅವಂತಿಪೋರಾ, ಅನಂತನಾಗ್, ಶೋಪಿಯಾನ್, ಪೂಂಚ್ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ಇಂದು ಶೋಧ ನಡೆಸಲಾಗಿದೆ. ಎರಡು ಪ್ರಕರಣಗಳಲ್ಲಿ ಒಂದನ್ನು ಎನ್ಐಎ ದೆಹಲಿ ಶಾಖೆಯು ೨೦೨೧ ರಲ್ಲಿ ದಾಖಲಿಸಿದ್ದು, ಇನ್ನೊಂದನ್ನು ೨೦೨೨ ರಲ್ಲಿ ಭಯೋತ್ಪಾದನಾ ವಿರೋಧಿ ಏಜೆನ್ಸಿಯ ಜಮ್ಮು ಶಾಖೆ ದಾಖಲಿಸಿದೆ. ಇಂದು ಮುಂಜಾನೆಯಿAದ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಿಕಟ ಸಮನ್ವಯದಲ್ಲಿ ಈ ಶೋಧಗಳನ್ನು ನಡೆಸಲಾಗುತ್ತಿದೆ. ಶ್ರೀನಗರ, ಪುಲ್ವಾಮಾ, ಅವಂತಿಪೋರಾ, ಅನಂತನಾಗ್, ಶೋಪಿಯಾನ್, ಪೂಂಛ್ ಮತ್ತು ಕುಪ್ವಾರದ ಏಳು ಜಿಲ್ಲೆಗಳಲ್ಲಿ ಆರ್ಸಿ ೩/೨೧/ಎನ್ಐಎ/ಡಿಎಲ್ಐ ಮತ್ತು ಆರ್ಸಿ ೫/೨೨/ಎನ್ಐಎ/ಜೆಎಂಯುನಲ್ಲಿ ೧೫ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಸಿಕ್ಕಿಂನಲ್ಲಿ ಭೂಕುಸಿತ: ಸಂಕಷ್ಟಕ್ಕೆ ಸಿಲುಕಿದ್ದ ೫೦೦ ಮಂದಿ ಪ್ರವಾಸಿಗರ ರಕ್ಷಣೆ
ನವದೆಹಲಿ, ಮೇ ೨೦: ಧಾರಾಕಾರ ಮಳೆಯಿಂದಾಗಿ ಸಿಕ್ಕಿಂನಲ್ಲಿ ಭೂಕುಸಿತವಾಗಿದ್ದು, ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ೫೦೦ ಮಂದಿ ಪ್ರವಾಸಿಗರನ್ನು ಭಾರತೀಯ ಸೇನಾಪಡೆ ರಕ್ಷಣೆ ಮಾಡಿದೆ. ಸಿಕ್ಕಿಂನ ಲಾಚುಂಗ್ ಮತ್ತು ಲಾಚೆನ್ ಕಣಿವೆಗೆ ಪ್ರಯಾಣಿಸುತ್ತಿದ್ದ ೫೦೦ ಪ್ರವಾಸಿಗರು ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಸಿಗರು ಭೂಕುಸಿತಗಳು ಮತ್ತು ರಸ್ತೆ ತಡೆಗಳಿಂದಾಗಿ ಚುಂಗ್ಥಾAಗ್ನಲ್ಲಿ ಸಿಲುಕಿಕೊಂಡಿದ್ದರು. ಜೆನ್ಎ ಲಾಚೆನ್, ಲಾಚುಂಗ್ ಮತ್ತು ಚುಂಗ್ಥಾAಗ್ನಲ್ಲಿ ಭಾರಿ ಧಾರಾಕಾರ ಮಳೆಯಾಗಿದೆ. ತ್ರಿಶಕ್ತಿ ಕಾರ್ಪ್ಸ್, ಭಾರತೀಯ ಸೇನೆಯ ಪಡೆಗಳು ಪ್ರವಾಸಿಗರ ರಕ್ಷಣೆಗಾಗಿ ಕಾರ್ಯಾಚರಣೆಗೆ ಇಳಿದು ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿವೆ. ರಕ್ಷಣೆಗೊಂಡ ೫೦೦ ಮಂದಿಯ ಪೈಕಿ ೨೧೬ ಪುರುಷರು, ೧೧೩ ಮಹಿಳೆಯರು ಮತ್ತು ೫೪ ಮಕ್ಕಳು ಸೇರಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಣೆಗೊಂಡ ಪ್ರವಾಸಿಗರನ್ನು ಮೂರು ವಿಭಿನ್ನ ಸೇನಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಅವರಿಗೆ ಬಿಸಿ ಊಟ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಒದಗಿಸಲಾಗಿದೆ. ರಾತ್ರಿ ಪ್ರವಾಸಿಗರಿಗೆ ವಸತಿ ಕಲ್ಪಿಸಲು ಸೈನಿಕರು ತಮ್ಮ ಬ್ಯಾರಕ್ಗಳನ್ನು ಖಾಲಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರವಾಸಿಗರ ಚಿಕಿತ್ಸೆಗಾಗಿ ಮೂರು ವೈದ್ಯಕೀಯ ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸೇನಾಪಡೆಗಳ ತ್ವರಿತ ಪ್ರತಿಕ್ರಿಯೆಯಿಂದ ದುರ್ಘಟನೆಯೊಂದು ತಪ್ಪಿದಂತಾಗಿದೆ ಎಂದು ವರದಿಗಳು ತಿಳಿಸಿವೆ.