ಕೂಡಿಗೆ, ಮೇ ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರುವಿನಲ್ಲಿ ಕಳೆದ ಎರಡು ದಿನಗಳಿಂದ ಬೆಂಡೆಬೆಟ್ಟದ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಹಾರಂಗಿ ನದಿಯನ್ನು ದಾಟಿ ಬಂದಿರುವ ಎರಡು ಕಾಡಾನೆಗಳು ಹುದುಗೂರು ಗ್ರಾಮದ ಶಿವಕುಮಾರ ಎಂಬವರ ಮನೆಯ ಮುಂಭಾಗÀ ಕಬ್ಬಿಣದ ಗೇಟ್ ಮುರಿದು ಮನೆಯ ಸಮೀಪದ ಜಮೀನಿಗೆ ದಾಳಿ ಮಾಡಿ ಅಡಿಕೆ, ಬಾಳೆ ಗಿಡಗಳನ್ನು ತುಳಿದು ತಿಂದು ಬಾರಿ ನಷ್ಟ ಪಡಿಸಿವೆ.
ಸಂಜೆ ೬ ಗಂಟೆಗೆ ಮುಖ್ಯ ದಾರಿಗಳಲ್ಲಿ
(ಮೊದಲ ಪುಟದಿಂದ) ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಸಾರ್ವಜನಿಕರು ತಿರುಗಾಡಲು ಭಯಭೀತರಾಗಿದ್ದಾರೆ. ಸಂಬAಧಿಸಿದ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಆನೆಕಾಡು ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸಲು ಮುಂದಾಗಬೇಕೆAದು ಸಾರ್ವಜನಿಕರ ಆಗ್ರಹವಾಗಿದೆ.