ಮಡಿಕೇರಿ, ಮೇ ೧೯: ಪೊಲೀಸರಿಂದ ಬಂಧಿಸಲ್ಪಟ್ಟ ಗಾಂಜಾ ಆರೋಪಿಯೋರ್ವ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಸೆನ್ ಪೊಲೀಸ್ ಠಾಣೆಯ ಪೊಲೀಸರು ಇಂದು ಚರಣ್ ಎಂಬ ಗಾಂಜಾ ಆರೋಪಿಯೋರ್ವರನ್ನು ಬಂಧಿಸಿ ಆತನಿಂದ ಸುಮಾರು ೧ ಕೆ.ಜಿ. ೧೦೫ ಗ್ರಾಂನÀಷ್ಟು ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಸಂದರ್ಭ ಅಲ್ಲಿ ಆತ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.