ಮಡಿಕೇರಿ, ಮೆ ೧೮: ಸುನ್ನಿ ಯುವಜನ ಸಂಗA (ಎಸ್‌ವೈಎಸ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸುಸಜ್ಜಿತವಾಗಿ ನವೀಕರಿಸಿದ ವರಕ್ಕಲ್ ಸಮಸ್ತ ಭವನ ಮತ್ತು ಖಾಝಿ ಹೌಸ್‌ನ ಉದ್ಘಾಟನಾ ಸಮಾರಂಭ ಹಾಗೂ ಎಸ್‌ವೈಎಸ್ ಕೇಂದ್ರ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲ್ಪಟ್ಟಿರುವ ಜಾಗರಣಾ ಯಾತ್ರೆಯ ಉದ್ಘಾಟನಾ ಸಮಾರಂಭ ತಾ.೨೧ರಂದು ಸಿದ್ದಾಪುರದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಎಂ.ವೈ. ಅಶ್ರಫ್ ಫೈಝಿ; ಎಸ್‌ವೈಎಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೊಡಗಿನ ಮುಸಲ್ಮಾನರ ಅಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕಳಕಳಿ ಹೊಂದಿರುವ ಸಮಸ್ತ ಎಂಬ ಉಲಾಮ ಒಕ್ಕೂಟದ ಕೇಂದ್ರ ಸ್ಥಾನ ಎಂಬAತೆ ವರಕ್ಕಲ್ ಮುಲ್ಲಕೋಯ ತಂಙಳ್ ಅವರ ಹೆಸರಿನಲ್ಲಿ ಅಂದಾಜು ರೂ.೩೨ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮಸ್ತ ಭವನ ಹಾಗೂ ಮುಸ್ಲಿಂ ಮೊಹಲ್ಲಾಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿರ್ಮಿಸಲಾಗಿರುವ ಖಾಝಿ ಭವನದ ಉದ್ಘಾಟನೆ ತಾ. ೨೧ರಂದು ಸಂಜೆ ೪ಗಂಟೆಗೆ ಸಿದ್ದಾಪುರದಲ್ಲಿ ನಡೆಯಲಿದೆ.

ಸಮಸ್ತ ಕೇಂದ್ರ ಮುಶಾವರದ ಸದಸ್ಯ ಎಂ.ಎA.ಅಬ್ದುಲ್ಲ ಫೈಝಿ ಧ್ವಜಾರೋಹಣ ನೆರವೇರಿಸುವರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಕಟ್ಟಡ ಉದ್ಘಾಟನೆ ಮಾಡುವರು. ಎಸ್‌ವೈಎಸ್ ಅಧ್ಯಕ್ಷ ಸಿ.ಪಿ.ಎಂ. ಬಶೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಬ್ದುಲ್ಲ ಫೈಝಿ ಉಸ್ತಾದ್, ಅಬ್ದುಲ್ ರಹಮಾನ್ ಮುಸ್ಲಿಯಾರ್, ಎ.ಸಿ.ಉಸ್ಮಾನ್ ಫೈಝಿ ಉಸ್ತಾದ್ ಅನುಗ್ರಹ ಭಾಷಣ ಮಾಡುವರು. ಅತಿಥಿಗಳಾಗಿ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್, ಕೆ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಕೆ.ಎಂ.ಇಬ್ರಾಹಿA ಹಾಜಿ, ಪಿ.ಎಂ.ಅಬ್ದುಲ್ ಹಕೀಂ, ಇರ್ಷಾದ್ ದಾರಿಮಿ ಮಿತ್ತಬೈಲು, ತಂಲಿಕ್ ದಾರಿಮಿ ಸಿ.ಎಂ. ಹಮೀದ್ ಮುಸ್ಲಿಯಾರ್ ಸೇರಿದಂತೆ ಸಮುದಾಯದ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಮೃತ ಮಹೋತ್ಸವ ಜಾಗರಣಾ ಯಾತ್ರೆ

ಕಟ್ಟಡ ಉದ್ಘಾಟನೆ ಬಳಿಕ ಎಸ್‌ವೈಎಸ್ ಕೇಂದ್ರ ಸಮಿತಿಯ ೭೦ನೇ ವಾಷಿಕೋತ್ಸವ ಅಂಗವಾಗಿ ಅಮೃತ ಮಹೋತ್ಸವದ ಪ್ರಯುಕ್ತ ‘ಇಸ್ಲಾಂ ಸಹಿಷ್ಣುತೆಯಾಗಿದೆ. ಸಮಸ್ತವಾಗಿದೆ ಹಾದಿ’ ಎಂಬ ಧ್ಯೇಯ ವಾಖ್ಯದಡಿ ಕೊಡಗು ಜಿಲ್ಲೆಯಿಂದ ಕೇರಳದ ರಾಜಧಾನಿ ತಿರುವನಂತ ಪುರಂವರೆಗೆ ನಡೆಯಲಿರುವ ಜಾಗರಣಾ ಯಾತ್ರೆಯ ಉದ್ಘಾಟನೆ ನಡೆಯಲಿದೆ. ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟನೆ ಮಾಡುವರು. ಎಸ್‌ವೈಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಸಯ್ಯದ್ ಮುಹಮ್ಮದ್ ಕೋಯ ಜಮಲುಲ್ಲೆöÊಲಿ ತಂಙಳ್ ಅಧ್ಯಕ್ಷತೆ ವಹಿಸುವರು. ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವ್, ಸಲಾಹುದ್ದೀನ್ ಫೈಝಿ ವಲ್ಲಪ್ಪುಯ, ಅಬ್ದುಸ್ಸಮದ್ ಪೂಕೋಟೂರ್ ಅವರುಗಳು ವಿಷಯ ಮಂಡನೆ ಮಾಡುವರು ಎಂದು ಹೇಳಿದರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುವಂತಹ ಸನ್ನಿವೇಶ ನಿರ್ಮಾಣವಾಗಬೇಕು. ಜನರಲ್ಲಿ ಅನಿವಾರ್ಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವದು ಉಲಮಾ ಉಮರಾ ನಾಯಕರ ಜವಾಬ್ದಾರಿ ಆಗಿದೆ, ಆದರ್ಶ ಜಾಗೃತಿ, ಆತ್ಮೀಯ, ಸಂಘಟನಾ ಜಾಗೃತಿ, ಜಾತ್ಯತೀತ ಸಿದ್ಧಾಂತಗಳ ಜಾಗೃತಿ ಕುರಿತು ವಿಧ್ವಾಂಸರು ಭಾಷಣ ಮಾಡಲಿದ್ದಾರೆ. ಇಸ್ಲಾಂ ಧರ್ಮದ ನೈಜ ವಿಶ್ವಾಸ ಆದರ್ಶಗಳ ಪರಿಚಯ ಮತ್ತು ೧೦೦ವರ್ಷಗಳ ಇತಿಹಾಸವಿರುವ ಸಮಸ್ತ ಹಾಗೂ ಪೋಷಕ ಸಂಘಟನೆಗಳ ಬಗ್ಗೆ ಜಾಗೃತಿ ಮೂಡಿಸುವದು , ಅಧ್ಯಾತ್ಮಿಕ ಚಿಂತನೆಗಳಿAದ ಕೂಡಿರುವ ಬದುಕನ್ನು ಪರಿಚಯಿಸುವದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಎಸ್‌ವೈಎಸ್ ಅಧ್ಯಕ್ಷ ಬಶೀರ್ ಹಾಜಿ, ಕೋಶಾಧಿಕಾರಿ ವೈ.ಎಂ. ಉಮ್ಮರ್ ಫೈಝಿ, ಕಾರ್ಯದರ್ಶಿಗಳಾದ ಇಕ್ಬಾಲ್ ಮುಸ್ಲಿಯಾರ್, ಎಂ.ಎA.ಎಸ್. ಹುಸೈನ್, ಹಂಝ ಹಾಜಿ ಕುಶಾಲನಗರ ಇದ್ದರು.