ಪೊನ್ನಂಪೇಟೆ, ಮೇ ೧೮: ಕೇರಳದ ತ್ರಿಶೂರ್ನಲ್ಲಿ ಜಪಾನ್ ಶೋಟಕಾನ್ ಕರಾಟೆ ಸಂಸ್ಥೆ (ಜೆ.ಎಸ್.ಕೆ.ಎ) ವತಿಯಿಂದ ತಾ. ೧೩ ಮತ್ತು ೧೪ ರಂದು ಆಯೋಜಿಸಲಾಗಿದ್ದ ಅಂರ್ರಾಷ್ಟಿçÃಯ ಮುಕ್ತ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ಪೊನ್ನಂಪೇಟೆ ಸಂತ ಅಂಥೋಣಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಪಿ.ಹೆಚ್. ಸ್ವಾಗತ್ ಕತ್ತ ವಿಭಾಗದಲ್ಲಿ ಚಿನ್ನದ ಪದಕ, ಕುಮಿತೆ ವಿಭಾಗದಲ್ಲಿ ಪಿ.ಎಸ್. ಗೌರವ್ ಚಿನ್ನದ ಪದಕ, ಆಕರ್ಷ್ ಸಂತೋಷ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸಂತ ಅಂಥೋಣಿ ಪ್ರೌಢಶಾಲೆಯ ಅರ್ಜುನ್ ಮಹೇಂದ್ರ ಪ್ರಥಮ ಸ್ಥಾನ ಮತ್ತು ಕಂಚಿನ ಪದಕ, ಎನ್.ಎಸ್. ಶ್ರೀಹರಿ ಕಂಚು, ಡೆಲ್ಸಿಣಿ ಮರಿಯಾ ಬೆಳ್ಳಿ ಪದಕ, ಗೋಣಿಕೊಪ್ಪ ಕಾಪ್ಸ್ ಶಾಲೆಯ ಸಿ.ಬಿ. ನಿಹಾನ್ ಐಯಣ್ಣ ಚಿನ್ನ ಮತ್ತು ಕಂಚಿನ ಪದಕ, ಅರ್ವತೊಕ್ಕಲು ಸರ್ವದೈವತ ಶಾಲೆಯ ಲಿರನ್ ಬೋಪಣ್ಣ ಎರಡು ಬೆಳ್ಳಿ ಪದಕ, ಗೋಣಿಕೊಪ್ಪ ಲಯನ್ಸ್ ಶಾಲೆಯ ಎ.ಎನ್. ದ್ರುವಿಕ್ ಚಿನ್ನದ ಪದಕ, ಐ.ಎಸ್. ಇಶಾನ್ ಮತ್ತು ಸಿ.ಕೆ. ತಮ್ಮಯ್ಯ ಬೆಳ್ಳಿ ಪದಕ, ಪಿ.ಎ. ಕೃದಯ್ ಎರಡು ಕಂಚಿನ ಪದಕ, ಕಂಪಲಾಪುರ ಐಕಾನ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಕ್ಷಿತ್ ಗೌಡ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಪೊನ್ನAಪೇಟೆ ಕರಾಟೆ ತರಬೇತಿ ಕೇಂದ್ರದ ತರಬೇತುದಾರ ಸೆನ್ಸಾಯ್ ಬಿ.ಎಸ್. ಸಂತೋಷ್ ಕುಮಾರ್ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿರುತ್ತಾರೆ.