ಮಡಿಕೇರಿ, ಮೇ ೧೮: ವೀರಾಜಪೇಟೆ ಕುಂದ ಕುಕ್ಲೂರು ಗ್ರಾಮದ ಶ್ರೀಮೂಲ ಭದ್ರಕಾಳಿ ದೇವಿಯ ವಾರ್ಷಿಕ ಬೇಡು ಹಬ್ಬ ತಾ. ೧೯ ರಂದು (ಇಂದು) ಆರಂಭಗೊಳ್ಳಲಿದೆ. ಪಟ್ಟಣಿ, ರಾತ್ರಿ ಬೇಡುಹಬ್ಬ, ತಾ. ೨೦ ರಂದು ಕುದುರೆ ಹಬ್ಬ, ತಾ. ೨೧ ರಂದು ಎತ್ತುಪೋರಾಟ ಹಾಗೂ ರಾತ್ರಿ ತೆರೆ. ತಾ. ೨೨ ರಂದು ದೇವಿಯ ಚೂಳೆಹಬ್ಬ, ತಾ. ೨೩ ರಂದು ದೇವಿಯ ಶುದ್ಧ ಕಲಶ ನಡೆಯಲಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.