ಮಡಿಕೇರಿ, ಮೇ ೧೮: ಕೊಡವ ಕುಟುಂಬಗಳ ನಡುವೆ ಕಳೆದ ಒಂದು ತಿಂಗಳಿನಿAದ ನಡೆಯುತ್ತಿರುವ ಕೌಟುಂಬಿಕ ಕ್ರಿಕೆಟ್ ಹಬ್ಬದ ಅಂತಿಮ ಹಣಾಹಣಿ ತಾ.೨೧ರಂದು ನೆರವೇರಲಿದೆ. ಅಂತಿಮ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭದಲ್ಲಿ ರಾಷ್ಟç ಕಂಡ ಹಾಕಿ ದಿಗ್ಗಜರು ಭಾಗಿಗಳಾಗುತ್ತಿರುವದು ವಿಶೇಷವಾಗಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಬಾಳೆಯಡ ಕ್ರಿಕೆಟ್ ಕಪ್ ಅಧ್ಯಕ್ಷ ಲೆ.ಕ. ಬಿ.ಕೆ. ಸುಬ್ರಮಣಿ ಅವರು; ಕಳೆದ ಏ.೨೨ರಿಂದ ನಾಪೋಕ್ಲುವಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊAಡ ೨೧ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾಟ ಬಾಳೆಯಡ ಕಪ್-೨೦೨೩ರಲ್ಲಿ ಇದೇ ಪ್ರಪ್ರಥಮ ಬಾರಿಗೆ ದಾಖಲೆ ಎಂಬAತೆ ೨೫೨ ಕುಟುಂಬಗಳು ಭಾಗವಹಿಸಿರುವದು ವಿಶೇಷವಾಗಿದ್ದು, ಒಟ್ಟು ೩ಸಾವಿರ ಮಂದಿ ಆಟಗಾರರು ತಮ್ಮ ಪ್ರದರ್ಶನ ನೀಡಿದ್ದಾರೆ. ತಾ.೧೯ರಂದು (ಇಂದು) ಸೆಮಿಫೈನಲ್ ಆಟಗಳು ನಡೆಯಲಿದ್ದು, ತಾ. ೨೧ ರಂದು ಅಂತಿಮ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

ಹಾಕಿ ದಿಗ್ಗಜರ ಸಮಾಗಮ

ಅಂತಿಮ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭಕ್ಕೆ ರಾಷ್ಟç ಕಂಡ ಹಾಕಿ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ ೧೧ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಪದ್ಮಶ್ರೀ, ಅರ್ಜುನ ಪ್ರಶಸ್ತಿ ವಿಜೇತ, ೧೯೭೫ರಲ್ಲಿ ಭಾರತ ಹಾಕಿ ತಂಡದ ನಾಯಕರಾಗಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ವಿಜೇತರುಗಳಾದ ಅಜಿತ್ ಪಾಲ್ ಸಿಂಗ್, ಒಲಂಪಿಯನ್ ಬಿ.ಪಿ.ಗೋವಿಂದ, ಒಲಂಪಿಯನ್ ವಿ.ಜಿ.ಫಿಲಿಪ್ಸ್, ಮಾಜಿ ಸಂಸದ, ಒಲಂಪಿಯನ್, ಅಸ್ಲಾಂ ಶೇರ್ ಖಾನ್, ಚಿನ್ನದ ಪದಕ ವಿಜೇತ ಪೈಕೇರ ಈ ಕಾಳಯ್ಯ, ಮೂರು ಬಾರಿ ಒಲಂಪಿಕ್ಸ್ನಲ್ಲಿ ಆಡಿದ ಚಿನ್ನದ ಪದಕ ವಿಜೇತ ಮನೆಯಪಂಡ ಎಂ.ಸೊಮಯ್ಯ ಹಾಗೂ ಬ್ರಿಗೇಡಿಯರ್ ಹರಿಚರಣ್ ಸಿಂಗ್ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ರಿಪಬ್ಲಿಕ್ ಟಿವಿ ಅಧ್ಯಕ್ಷ ಚೇರಂಡ ಕಿಶನ್, ಉದ್ಯಮಿಗಳಾದ ದಿಲಿಪ್, ಸಾಮ್ರಾಟ್, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಭಾಗವಹಿಸಲಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಸುಬ್ರಮಣಿ ತಿಳಿಸಿದರು.

ಗೋಷ್ಠಿಯಲ್ಲಿ ಕ್ರಿಕೆಟ್ ಸಮಿತಿ ಕಾರ್ಯದರ್ಶಿ ಸದಾ ಕುಶಾಲಪ್ಪ, ಪದಾಧಿಕಾರಿಗಳಾದ ಅಂಜು ಸುಬ್ರಮಣಿ, ಬಿ.ಸಿ.ಪೂಣಚ್ಚ, ದಿವ್ಯ ಮಂದಪ್ಪ, ನೀಮ ಶಿವು ಇದ್ದರು.