ಚೆಯ್ಯಂಡಾಣೆ, ಮೇ ೧೮: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಆಶ್ರಯದಲ್ಲಿ ೪ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ತಾ. ೨೫ ರಂದು ನಾಪೋಕ್ಲು ಸಮೀಪದ ಚೆರಿಯಪರಂಬು ಶಾದಿಮಹಲ್ನಲ್ಲಿ ಆಯೋಜಿಸಲಾಗಿದೆ.
ವೆಲ್ಫೇರ್ ಯುಎಇ ಸಮಿತಿಯು ಕಳೆದ ೩ ವರ್ಷಗಳಿಂದ ೨೦ ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ್ದು, ಈ ವರ್ಷ ೪ ಜೋಡಿಗೆ ವಿವಾಹ ಮಾಡಿಸಲಿದೆ. ಈ ಬಾರಿ ಪಡಿಯಾಣಿ, ಎಮ್ಮೆಮಾಡು, ನಾಪೋಕ್ಲು, ದೇವಣಗೇರೆಯ ಬಡ ಹೆಣ್ಣು ಮಕ್ಕಳನ್ನು ವಿವಾಹಕ್ಕೆ ಆಯ್ಕೆ ಮಾಡಲಾಗಿದೆ. ವಧು-ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ, ವಸ್ತç, ವಾಚನ್ನು ಸಂಘಟನೆ ವತಿಯಿಂದ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಉಮರಾ, ಉಲಮಾ ನಾಯಕರು, ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ವೆಲ್ಫೇರ್ ಯುಎಇ ಅಧ್ಯಕ್ಷರಾಗಿ ಉಸ್ಮಾನ್ ಹಾಜಿ ನಾಪೋಕ್ಲು, ಪ್ರಧಾನ ಕಾರ್ಯದರ್ಶಿ ಯಾಗಿ ಸಲೀಂ ಗುಂಡಿಕೆರೆ, ಕೋಶಾಧಿಕಾರಿಯಾಗಿ ಅಹ್ಮದ್ ಚಾಮಿಯಾಲ ಕಾರ್ಯ ನಿರ್ವಹಿಸುತ್ತಿದ್ದು, ಸಾಮೂಹಿಕ ವಿವಾಹ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಕಾರ್ಯಾಧ್ಯಕ್ಷರಾಗಿ ಮುಝಮಿಲ್ ಪಾಲಿಬೆಟ್ಟ, ಸಂಯೋಜಕರಾಗಿ ಇಸ್ಮಾಯಿಲ್ ಮೂರ್ನಾಡು, ಕೋಶಾಧಿಕಾರಿಯಾಗಿ ಅಹ್ಮದ್ ಚಾಮಿಯಾಲ, ಅರಫಾತ್ ನಾಪೋಕ್ಲು, ರಿಯಾಝ್ ಕೊಂಡAಗೇರಿ, ಮುಜೀಬ್ ಕಡಂಗ ಮತ್ತಿತರರು ಕಾರ್ಯ ನಿರ್ವಹಿಸುತ್ತಿದ್ದಾರೆ.