ಮಡಿಕೇರಿ, ಮೇ ೧೭: ಹಾಕಿ ಇಂಡಿಯಾ ವತಿಯಿಂದ ರೂರ್ಕೆಲಾದ ಒಡಿಶಾದಲ್ಲಿ ತಾ. ೧೮ ರಿಂದ ೨೮ರತನಕ ನಡೆಯಲಿರುವ ೧೩ನೇ ಸಬ್‌ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಹಾಕಿ ಕರ್ನಾಟಕ ತಂಡದ ನಾಯಕನಾಗಿ ಕೊಡಗಿನ ಕೆ.ಡಿ. ಹೃತಿಕ್ ಅಯ್ಯಪ್ಪ ಆಯ್ಕೆಯಾಗಿದ್ದಾರೆ.

ತಂಡದ ಬಹುತೇಕ ಆಟಗಾರರು ಕೊಡಗು ಮೂಲದವರಾಗಿದ್ದಾರೆ. ತಂಡವನ್ನು ಕೊಡಗಿನವರಾದ ಕೃಶಾಂಕ್ ಕಾಳಪ್ಪ ಟಿ.ಬಿ., ಕುಶಾಲ್ ನಂಜಪ್ಪ ಬಿ.ಎಂ. (ಗೋಲ್ ಕೀಪರ್ಸ್) ನಿಶಾಂತ್ ಎಂ., ವಚನ್ ಉತ್ತಪ್ಪ ಎಸ್.ಎಲ್., ವಿಖ್ಯಾತ್ ಮಂದಣ್ಣ ಬಿ.ಕೆ., ಅಚ್ಚಯ್ಯ ಎಂ.ಎA., ಸಂಪನ್ ಗಣಪತಿ ಬಿ.ಪಿ., ವಿಶ್ವಜಿತ್ ಕೆ.ವಿ., ಸುಪ್ರಿತ್ ಜಿ., ವರುಣ್ ಮಾದಪ್ಪ ಸಿ.ಆರ್., ಉತ್ತಪ್ಪ ಕೆ.ಎಸ್., ಜಶನ್ ತಿಮ್ಮಯ್ಯ ಎಂ.ಸಿ., ಕಾರ್ತಿಕ್ ಕಾರ್ಯಪ್ಪ ವಿ.ವಿ. ಪ್ರತಿನಿಧಿಸಲಿದ್ದಾರೆ.