ಮಡಿಕೇರಿ, ಮೇ ೧೭: ಕೊಡವ ವಿಶೇಷತೆಯಾಗಿ ಬಳಸಲ್ಪಡುತ್ತಿದ್ದ ಕೋವಿ - ಒಡಿಕತ್ತಿ - ಪೀಚೆಕತ್ತಿಯನ್ನು ಒಳಗೊಂಡ ಚಿಹ್ನೆ (ಲೋಗೋ) ಗೆ ಇದೀಗ ಅಧಿಕೃತವಾಗಿ ನೋಂದಾವಣೆಗೊAಡಿದೆ. ಈ ನಿಟ್ಟಿನಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ನಡೆಸಿದ್ದ ಹಲವು ವರ್ಷಗಳ ಪ್ರಯತ್ನಕ್ಕೆ ಭಾರತ ಸರಕಾರದ ಟ್ರೇಡ್ ಮಾರ್ಕ್ಸ್ ರಿಜಿಸ್ಟರಿ ಮೂಲಕ ಒಪ್ಪಿಗೆ ದೊರೆತಿದೆ.

ಕೊಡವರು ಸೇರಿದಂತೆ ಇತರ ಕೊಡವ ಭಾಷಿಕ ಮೂಲ ನಿವಾಸಿ ಜನಾಂಗದವರಿಗೆ ಮಾತ್ರ ಈ ಚಿಹ್ನೆ ಬಳಸುವ ಅವಕಾಶವಿರಬೇಕು ಎಂಬ ಮನವಿಯನ್ನು ಮುಂದಿಟ್ಟು ಸಂಘಟನೆ ೨೦೨೦ನೇ ಇಸವಿಯಿಂದ ಪ್ರಯತ್ನ ನಡೆಸಿತ್ತು. ಇದಕ್ಕೆ ಸಂಬAಧಿಸಿದAತೆ ಮೈಸೂರು, ಚೆನ್ನೆöÊ, ಮುಂಬೈ ಹಾಗೂ ದೆಹಲಿಯಲ್ಲಿರುವ ಭಾರತ ಸರಕಾರದ ಟ್ರೇಡ್ ಮಾರ್ಕ್ಸ್ ರಿಜಿಸ್ಟರಿಯ ಕಚೇರಿಗಳಲ್ಲಿ ಈ ಕುರಿತಾದ ಮನವಿಗೆ ಸಂಬAಧಿಸಿದAತೆ ಹಲವು ಸುತ್ತಿನ ಮಾತುಕತೆಗಳು, ಪ್ರಶ್ನೆ, ಸಮಜಾಯಿಷಿಕೆಯಂತಹ ಪ್ರಕ್ರಿಯೆಗಳು ನಡೆದಿದ್ದವು.

ಇದೀಗ ಅಂತಿಮವಾಗಿ ಇದಕ್ಕೆ ಒಪ್ಪಿಗೆ ದೊರೆತಿರುವುದಾಗಿ ದಿನೇಶ್ ಬೆಳ್ಯಪ್ಪ ಮಾಹಿತಿ ನೀಡಿದ್ದಾರೆ. ಈ ಚಿಹ್ನೆಯ ದುರ್ಬಳಕೆಯಾಗುತ್ತಿದ್ದು, ಇದಕ್ಕೆ ನಿಯಂತ್ರಣಬೇಕೆAಬ ಚಿಂತನೆಯಿAದ ಅಧಿಕೃತ ಟ್ರೇಡ್‌ಮಾರ್ಕ್ ಆಗಿ ಪರಿಗಣಿಸಿ ಕೊಡವರು ಹಾಗೂ ಇತರ ೨೧ ಕೊಡವ ಭಾಷಿಕ ಜನಾಂಗದವರಿಗೆ ಮಾತ್ರ ಅವಕಾಶ ಇರಬೇಕು ಎಂಬ ಬೇಡಿಕೆಗೆ ಇದೀಗ ಒಪ್ಪಿಗೆ ದೊರೆತಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಹಲವರು ಸಹಕಾರ ನೀಡಿರುವುದಾಗಿ ದಿನೇಶ್ ಹೇಳಿದ್ದಾರೆ. ಈ ಬಗ್ಗೆ ಸಂಘಟನೆಗೆ ಸಹಕಾರ ನೀಡಿರುವ ಮೈಸೂರಿನ ವಕೀಲ ಪಾಂಡAಡ ಮೇದಪ್ಪ ಅವರು ಮಾಹಿತಿ ನೀಡಿದ್ದಾರೆ.