ನಾಪೋಕ್ಲು, ಮೇ ೧೭: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ ಯ ಬುಧವಾರದ ಪಂದ್ಯಗಳಲ್ಲಿ ಮೂರು ತಂಡಗಳು ಮುನ್ನಡೆ ಸಾಧಿಸಿದವು.

ದಿನದ ಮೊದಲ ಪಂದ್ಯದಲ್ಲಿ ಬೊಜ್ಜಂಗಡ ತಂಡದ ವಿರುದ್ಧ ಚೆಕ್ಕೆರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿತು. ಬೊಜ್ಜಂಗಡ ಏಳು ವಿಕೆಟ್ ನಷ್ಟಕ್ಕೆ ೩೯ ರನ್ ಗಳಿಸಿ ಸೋಲನ್ನು ಅನುಭವಿಸಿತು. ಬೊಜ್ಜಂಗಡ ಗಗನ್ ಮ್ಯಾನ್ ಆಫ್ ದ ಮ್ಯಾಚ್ ಆಗಿ ಹೊರಹೊಮ್ಮಿದರು, ಎರಡನೇ ಪಂದ್ಯದಲ್ಲಿ ಕಳಕಂಡ ವಿರುದ್ಧ ಮೇರಿಯಂಡ ಮೂರು ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿತು. ಉತ್ತರವಾಗಿ ಆಡಿದ ಕಳಕಂಡ ತಂಡ ಒಂದು ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿ ಗೆಲುವು ಸಾಧಿಸಿತು. ಮೇರಿಯಂಡ ನಿಖಿಲ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು ಮೂರನೇ ಪಂದ್ಯದಲ್ಲಿ ಮಡುವಂಡ ತಂಡ ಎರಡು ವಿಕೆಟ್ ನಷ್ಟಕ್ಕೆ ೮೨ ರನ್ ಗಳಿಸಿತು ಉತ್ತರವಾಗಿ ಆಡಿದ ಮುಂಡಚಾಡಿರ ತಂಡ ಐದು ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿತು. ಈ ಪಂದ್ಯದಲ್ಲಿ ಮಂಡುವAಡ ತಂಡ ಜಯ ಸಾಧಿಸಿತು.

ತಾ. ೨೧ ರಂದು ಫೈನಲ್

ತಾ. ೨೧ರಂದು ಫೈನಲ್ ಪಂದ್ಯಾಟ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ೧೯೭೫ರ ವಿಶ್ವಕಪ್‌ನ ನಾಯಕರಾಗಿದ್ದ ಅಜಿತ್ ಪಾಲ್ ಸಿಂಗ್, ಬ್ರಿಗೇಡಿಯರ್ ಹರ್‌ಚರಣ್ ಸಿಂಗ್(ವಿಶಿಷ್ಟ ಸೇವಾ ಮೆಡಲ್). ಕೊಡಗಿನ ಸಿಡಿಲು ಮರಿ ಎಂದೇ ಖ್ಯಾತಿಯಾದ ಬಿ.ಪಿ.ಗೋವಿಂದ, ಆಟಗಾರ ವಿಕ್ಟರ್ ಜಾನ್ ಫಿಲಿಪ್ಸ್x, ಕೊಡಗಿನ ಚಿನ್ನದ ಹುಡುಗ ಎಂದೇ ಖ್ಯಾತಿಯಾದ ೧೯೮೦ರ ಮಾಸ್ಕೋ ಒಲಂಪಿಕ್ಸ್ನ ಎಂ.ಎA. ಸೋಮಯ್ಯ ಹಾಗೂ ಪೈಕೇರ ಕಾಳಯ್ಯ ಪಾಲ್ಗೊಳ್ಳಲಿದ್ದಾರೆ.