ಶನಿವಾರಸಂತೆ, ಮೇ ೧೭ : ಶನಿವಾರಸಂತೆ ಅರಣ್ಯ ವಲಯ ವ್ಯಾಪ್ತಿಯ ಕಾಜೂರು ಸಸ್ಯ ಕ್ಷೇತ್ರದಲ್ಲಿ ಆರ್.ಎಸ್.ಪಿ.ಡಿ. ಯೋಜನೆಯಡಿ ಬೆಳೆಯಲಾಗಿರುವ ಸಿಲ್ವರ್, ಶ್ರೀಗಂಧ, ರಕ್ತಚಂದನ, ಬೇರಳಿ, ಹೆಬ್ಬೇವು, ತೇಗ, ಕೂಳಿ, ಬೀಟೆ, ಮಹಾಗನಿ, ನೇರಳೆ, ಕಿತ್ತಳೆ, ಮಾವು, ಪನ್ನೇರಳೆ, ಬಿದಿರು ಇತ್ಯಾದಿ ಜಾತಿಯ ಸಸಿಗಳನ್ನು ಬೆಳೆಯಲಾಗಿದೆ.
ಈ ಸಸಿಗಳನ್ನು ಅರಣ್ಯ ಇಲಾಖೆ ತಾ. ೨೨ ರಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತದೆ. ಆಸಕ್ತ ಫಲಾನುಭವಿ ರೈತರು ಆರ್.ಟಿ.ಸಿ., ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ೨ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿ ಸಸಿಗಳನ್ನು ಪಡೆದುಕೊಳ್ಳಬಹುದು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.