ಮಡಿಕೇರಿ, ಮೇ ೧೭: ಕೊಡವ ಜನಾಂಗದ ವಿಶಿಷ್ಟವಾದ ಸಂಸ್ಕೃತಿ, ಆಚಾರ - ವಿಚಾರಗಳು, ಹಬ್ಬ ಹರಿದಿನಗಳ ಮಹತ್ವ, ಪರಂಪರೆಯೊAದಿಗೆ ಕೊಡಗು ಜಿಲ್ಲೆಯ ಅವಿನಾಭಾವ ಸಂಬAಧದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಪರಿಕಲ್ಪನೆಯೊಂದಿಗೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ನ ಮುಂದಾಳತ್ವದಲ್ಲಿ ಇದೇ ಪ್ರಥಮ ಬಾರಿಗೆ ಕೊಡವ ಯುವಮೇಳ ಕಾರ್ಯಕ್ರಮ ಜರುಗುತ್ತಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ.

ತಾ. ೨೦ ರ ಶನಿವಾರ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿಗದಿಯಾಗಿರುವ ಈ ಕಾರ್ಯಕ್ರಮಕ್ಕೆ ಜಿಲ್ಲೆ ಸೇರಿದಂತೆ ವಿವಿಧೆಡೆಯ ಕೊಡವ ಸಮಾಜಗಳು, ಕೊಡವ ಸಮಾಜಗಳ ಅಧೀನದ ಸಂಘಗಳು ಇನ್ನಿತರ ಸಂಘಟನೆಗಳು, ವಿವಿಧ ಕೊಡವಕೇರಿ, ಹೋರಾಟ ಸಂಘಟನೆಗಳು ಈ ರೀತಿಯಾಗಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ.

ಪ್ರಸ್ತುತ ಕಾರಣಾಂತರಗಳಿAದ ವಿವಿಧೆಡೆಗಳಲ್ಲಿ ಚದುರಿ ಹೋದಂತಿರುವ ಯುವ ಜನಾಂಗವನ್ನು ಕೊಡಗಿನತ್ತ ಆಕರ್ಷಿಸುವುದು, ಇಲ್ಲಿಗೆ ವಿಶಿಷ್ಟ ಪರಂಪರೆಯ ಮಹತ್ವವನ್ನು ಪರಿಚಯಿಸಿ ಪರಸ್ಪರ ಒಗ್ಗೂಡಿಸಿ ಸಾಮರಸ್ಯ ಮೂಡಿಸುವ ಪರಿಕಲ್ಪನೆಯೊಂದಿಗೆ ಈ ಯುವಮೇಳ ಆಯೋಜಿಸಲಾಗಿದೆ. ೪೦ರ ವಯೋಮಿತಿಯೊಳಗಿನ ಎಲ್ಲಾ ಯುವಕ - ಯುವತಿಯರನ್ನು ಒಗ್ಗೂಡಿಸಿ ಹಿರಿಯರು ಇವರ ಹಿಂದೆ ನಿಂತು ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ ಎಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ನ ಪ್ರಮುಖರು ತಿಳಿಸಿದ್ದಾರೆ.

ತಾ. ೨೦ ರಂದು ಜಿಲ್ಲೆಯ ವಿವಿಧೆಡೆಗಳಿಂದ ಸೇರಿದಂತೆ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಇನ್ನಿತರ ಭಾಗಗಳಿಂದಲೂ ಯುವಕರು ಮಡಿಕೇರಿಯತ್ತ ಆಗಮಿಸಲು ತಯಾರಿ ನಡೆಯುತ್ತಿದೆ. ಹೊರಭಾಗದಿಂದ ವಾಹನ ವ್ಯವಸ್ಥೆಗಳನ್ನು ಮೊದಲಾಗುತ್ತಿದ್ದು, ಸುಮಾರು ಐದು ಸಾವಿರ ಮಂದಿ ಸೇರುವ ನಿರೀಕ್ಷೆಯಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸೆಲೆಬ್ರೆಟಿಗಳು ಇನ್ನಿತರು ತಮ್ಮ ಸಂದೇಶ ನೀಡುತ್ತಿದ್ದಾರೆ.

(ಮೊದಲ ಪುಟದಿಂದ)

ಸಾAಸ್ಕೃತಿಕ ಮೆರವಣಿಗೆ

ತಾ. ೨೦ ರಂದು ಬೆಳಿಗ್ಗೆ ನಗರದ ಕಾವೇರಿ ಹಾಲ್ ಬಳಿಯಿಂದ ಕಾರ್ಯಕ್ರಮ ನಿಗದಿಯಾಗಿರುವ ಕ್ರಿಸ್ಟಲ್ ಕೋರ್ಟ್ ತನಕ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ಯನ್ನು ಏರ್ಪಡಿಸಲಾಗಿದೆ. ಬೈರ‍್ಸ್ ತಂಡದ ಬೈಕ್‌ಜಾಥಾ ದೊಂದಿಗೆ ದುಡಿಕೊಟ್ಟ್ಪಾಟ್, ಒಡ್ಡೋಲಗ ಸೇರಿದಂತೆ ವಿಶೇಷತೆಯಂತಿರುವ ಕೋವಿ, ದುಡಿ, ತಾಳ, ಒಡಿಕತ್ತಿ, ತಳಿಯತಕ್ಕಿ ಸೇರಿದಂತೆ ವಿವಿಧ ಮೂಲ ಪರಿಕರಗಳನ್ನು ಪ್ರತಿಬಿಂಬಿಸುವ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕೊಡವ ಜನಪದ ಕಲೆಯನ್ನು ಒಳಗೊಂಡ ವಿವಿಧ ಕಲಾತಂಡಗಳ ಸದಸ್ಯರೂ ಹೆಜ್ಜೆ ಹಾಕಲಿದ್ದಾರೆ. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ವಿವಿಧ ರಂಗದಲ್ಲಿನ ಕೆಲವು ಯುವ ಸಾಧಕರನ್ನು ಕರೆಸಲಾಗುತ್ತಿದ್ದು, ಇವರನ್ನು ತೆರೆದ ವಾಹನದಲ್ಲಿ ಕರೆದೊಯ್ಯಲಾಗುವುದು.

ಸಭಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿಲ್ಲ. ಮೆರವಣಿಗೆ ಬಳಿಕ ಈ ಯುವ ಸಾಧಕರ ಪರಿಚಯ ಇವರಿಂದ ಕೆಲವು ಅನಿಸಿಕೆಯೊಂದಿಗೆ ಸಂಸ್ಕೃತಿಗೆ ಒತ್ತು ನೀಡುವಂತಹ ಒಂದಷ್ಟು ಕಾರ್ಯಕ್ರಮಗಳನ್ನು ಮಾತ್ರ ಈ ಬಾರಿ ಆಯೋಜಿಸಲಾಗಿದೆ. ಕೊಡವ ಪರಂಪರೆಯ ಮಹತ್ವ ತಿಳಿಸುವ ಜಾಗೃತಿಯ ನಾಟಕ ಪ್ರದರ್ಶನ, ಕೊಡವ ಹಾಡು - ನೃತ್ಯ, ಹಬ್ಬ ಹರಿದಿನಗಳ ಪ್ರತಿಬಿಂಬಿಸುವಿಕೆಯೊAದಿಗೆ ಜನಾಂಗದಲ್ಲಿ ಹುಟ್ಟಿನಿಂದ ಸಾವಿನ ತನಕದ ಆಚರಣೆಗಳು ಇದರ ಪ್ರಾತ್ಯಕ್ಷಿಕೆಯನ್ನು ಪ್ರತಿಬಿಂಬಿಸುವ ರ‍್ಯಾಂಪ್‌ವಾಕ್ ಬಳಿಕ ಡಿಜೆಯಂತಹ ಕಾರ್ಯಕ್ರಮದೊಂದಿಗೆ ಯುವಮೇಳ ಮುಕ್ತಾಯಗೊಳ್ಳಲಿದೆ.

-ಶಶಿ ಸೋಮಯ್ಯ