ಸುಂಟಿಕೊಪ್ಪ, ಮೇ ೧೬: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಡೆಂಗ್ಯೂ ಜ್ವರ’ ಕಾಡುತ್ತಿದ್ದು ಸಾರ್ವಜನಿಕರು ಭಯ ಭೀತಿಯಿಂದ ಜೀವನ ಸಾಗಿಸುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಗ್ರಾಮದ ಒಂದನೇ ವಿಭಾಗದಲ್ಲಿ ಗುಡ್ಡಪ್ಪ ರೈ ಬಡಾವಣೆ ಉಲುಗುಲಿ ಎರಡನೇ ಪಾರ್ವತಮ್ಮ ಬಡಾವಣೆ ವಿಭಾಗದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಮೂರು ವಾರಗಳ ಹಿಂದೆ ಒಂದೇ ಕುಟುಂಬ ನಾಲ್ವರಿಗೆ ಇದೇ ಕಾಯಿಲೆಯಿಂದ ಮಡಿಕೇರಿ ಜಿಲ್ಲಾ ಆಸ್ಪತ್ರೆ ದಾಖಲಾಗಿ ಅದರಲ್ಲಿ ಮೂವರು ಗುಣಮುಖರಾಗಿ ಮತ್ತೊಬ್ಬರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿ ಗುಣಮುಖರಾಗಿದ್ದಾರೆ.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಗ್ರಾಮಸ್ಥರಲ್ಲಿ ಜ್ವರ ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದರೂ ಗ್ರಾಮ ಪಂಚಾಯಿತಿ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವಾಗಲಿ ಇದುವರೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾರ್ಯರೂ¥ಕ್ಕೆ ಬಂದಿಲ್ಲ. ಕಳೆದ ಮೂರು ವಾರಗಳಿಂದ ಚರಂಡಿಗೆ, ಹಳ್ಳಗಳಿಗೆ ಔಷಧಿ ಸಿಂಪಡಿಸುವ ಕಾರ್ಯ ನಡೆಸಿಲ್ಲ. ಮೀನು - ಮಾಂಸ ಮಳಿಗೆಗಳಿಂದ ತ್ಯಾಜ್ಯ ಚರಂಡಿಗಳಲ್ಲಿ ಹರಿಯುತ್ತಿದ್ದು ಗಬ್ಬು ವಾಸನೆಯಿಂದ ಕೂಡಿದೆ. ರಸ್ತೆ ಬದಿ ಇರುವ ಮನೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಸಂಬAಧಿಸಿದವರು ರಸ್ತೆಯ ಎರಡು ಬದಿ ಚರಂಡಿಗಳ ಮೇಲೆೆ ಸ್ಲಾö್ಯಬ್ ಅಳವಡಿಸದೆ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಅಧಿಕವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯು ಏಳು ವಾರ್ಡ್ಗಳನ್ನು ಹೊಂದಿದ್ದು ಸುಮಾರು ೧೨ ಸಾವಿರ ಜನಸಂಖ್ಯೆ ಇದೆ. ಸೊಳ್ಳೆಗಳಿಂದ ನಾನಾ ರೋಗ ಹರಡುವ ಸಾಧ್ಯತೆ ಇದೆÉ. ಕೂಡಲೆ ಆರೋಗ್ಯ ಇಲಾಖೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎಚ್ಚೆತ್ತು ಸುಂಟಿಕೊಪ್ಪ ಜನರಿಗೆ ಜಾಗೃತಿ ಮೂಡಿಸು ಕಾರ್ಯ ಮಾಡಿ ಸಾರ್ವಜನಿಕರಿಗಾಗುವ ತೊಂದರೆಯ ಬಗ್ಗೆ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದ್ದಾರೆ.

- ಶಶಿಕುಮಾರ್ ರೈ