ಮಡಿಕೇರಿ, ಮೇ ೧೬: ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಹೊಸಬಡಾವಣೆಯ ನಿವಾಸಿ, ಚಾರ್ಲಿ ಎಂಬವರ ಪತ್ನಿ ಅಪೋಲಿನ್ (೫೫) ಅವರು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುತ್ರ ಮೆಲ್ವಿನ್ ಅವರನ್ನು ನೋಡಿಕೊಂಡಿದ್ದು, ತಾ. ೧೩ ರಿಂದ ಆಸ್ಪತ್ರೆಯಿಂದ ಎಲ್ಲಿಗೋ ತೆರಳಿದವರು ಮತ್ತೆ ಹಿಂತಿರುಗಿಲ್ಲ ಎಂದು ಅವರ ಸಂಬAಧಿ ಆಲ್ಬರ್ಟ್ ನರೋನಾ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಠಾಣೆ (೨೨೯೩೩೩/ ೯೪೮೦೮೦೪೯೪೫) ಗೆ ತಿಳಿಸಲು ಪೊಲೀಸ್ ಪ್ರಕಟಣೆ ಕೋರಿದೆ.