ಮಡಿಕೇರಿ, ಮೇ ೧೬: ನಗರದ ಶ್ರೀ ರಾಮಲಿಂಗ ಚೌಡೇಶ್ವರಿ ಹಾಗೂ ಶ್ರೀ ಬನಶಂಕರಿ ಅಮ್ಮನವರ ಕೆಂಡಕೊAಡೋತ್ಸವ ತಾ. ೩ ರಿಂದ ೫ ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು.
೫ ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವಿಯ ಅಭಿಷೇಕದೊಂದಿಗೆ ಆರಂಭವಾಯಿತು. ಕಲಶ ಹೊತ್ತ ಮಹಿಳೆಯರು, ವೀರಭದ್ರರ ವ್ರತಧಾರಿಗಳು, ವಾದ್ಯ ಘೋಷ, ಪರಾಕು, ಖಡ್ಗಘೋಷಗಳೊಂದಿಗೆ ದೇವಾಂಗ ಕುಲಬಾಂಧವರು ಮಹದೇವಪೇಟೆಯ ಮುಖ್ಯ ಬೀದಿಯಲ್ಲಿ ಮೆರವಣಿಗೆ ತೆರಳಿ ಕೆರೆ ಮತ್ತು ಕೆಂಡದಗುAಡಿಯಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಪುಣ್ಯಹ, ಅಗ್ನಿ ಸ್ಪರ್ಶ ನೆರವೇರಿಸಿದರು.
ಸಂಜೆ ದೇವರಮನೆ ಶ್ರೀ ಬನಶಂಕರಿ ಅಮ್ಮನವರ ಪೆಟ್ಟಿಗೆಯನ್ನು ಹೊತ್ತ ವ್ರತಧಾರಿಗಳು ಮತ್ತು ಶ್ರೀ ಚೌಡೇಶ್ವರಿಯ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆಯ ಮೂಲಕ ಕೆರೆಯಲ್ಲಿ ಗಂಗಾ ಪೂಜೆಯನ್ನು ಮುಗಿಸಿ ಕೆಂಡಕೊAಡದ ಬಳಿಯಲ್ಲಿ ವೀರಭದ್ರ ವ್ರತಧಾರಿಗಳು ಧಕ್ಷಬ್ರಹ್ಮನ ಸಂಹಾರ ಮಾಡಿದ ಮೇಲೆ ಕೆಂಡವನ್ನು ಹಾದು ನಂತರ ಸ್ವಸ್ಥಾನವನ್ನು ಸೇರಿ ಮಹಾಪೂಜೆ, ನೈವೇದ್ಯ, ನಡೆದು ಪ್ರಸಾದ ವಿನಿಯೋಗ ನಡೆಯಿತು.
ತಾ. ೪ ರಂದು ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ತಾ. ೬ ಮತ್ತು ೭ ರಂದು ದೇವಿಯ ದೂತರಾದ ಕರಿರಾಯ, ಕೆಂಚರಾಯ, ನರಸಿಂಹಸ್ವಾಮಿ, ಆಂಜನೇಯ ಸ್ವಾಮಿಯವರಿಗೆ ದಾಸಯ್ಯನವರ ನೇತೃತ್ವದಲ್ಲಿ ಹರಿಸೇವೆ ಮೆರವಣಿಗೆಯ ಮೂಲಕ ಕೆರೆಯ ಬಳಿ ತೆರಳಿ, ಅಲ್ಲಿ ಮುತ್ತತ್ತರಾಯರನ್ನು ಹೊತ್ತ ವ್ರತಧಾರಿಗಳೊಂದಿಗೆ ಕೆಂಡದಗುAಡಿಯ ಮೈದಾನಕ್ಕೆ ತೆರಳಿ ಸಾಂಪ್ರದಾಯಿಕ ಪೂಜೆಗಳನ್ನು ಮಾಡಲಾಯಿತು