ಗೋಣಿಕೊಪ್ಪ ವರದಿ, ಮೇ ೧೬: ಬೀರುಗ ಗ್ರಾಮದಲ್ಲಿರುವ ಚೆಪ್ಪುಡಿಕೊಲ್ಲಿ ಪಾಲ್‌ಪಾರ್ ದೇವರ ಉತ್ಸವ ನಡೆಯಿತು.

ಚಾಮುಂಡೇಶ್ವರಿ, ವಿಷ್ಣುಮೂರ್ತಿ ದೇವರುಗಳ ಮೇಲೇರಿ ಉತ್ಸವ ಎಂಟು ದಿನ ನಡೆಯಿತು. ಭಕ್ತರು ಹರಕೆ ಒಪ್ಪಿಸಿ ಪುನೀತರಾದರು. ಮಂಗಳವಾರ ಹಬ್ಬಕ್ಕೆ ತೆರೆ ಬಿದ್ದಿತು.

ದೇವರ ತೋರಣ ಮೂಹೂರ್ತದೊಂದಿಗೆ ಹಬ್ಬಕ್ಕೆ ಕಟ್ಟು ಬೀಳುವ ಆಚರಣೆಯೊಂದಿಗೆ ಚಾಲನೆ ನೀಡಲಾಯಿತು. ಸ್ವಸ್ತಿ ಪುಣ್ಯಾಹ, ತಂತ್ರಿ ಪರಗೃಹ, ಮಹಾಗಣಪತಿ ಹೋಮ, ಪರಿವಾರ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, ಉತ್ಸವಮೂರ್ತಿ ದರ್ಶನ, ಇರ್ ಬೊಳಕ್, ಮೃತ್ಯುಂಜಯ ಹೋಮ, ಶ್ರೀಸೂಕ್ತ ಹೋಮ, ಪುರುಷ ಸೂಕ್ತ ಹೋಮ, ತುಲಾಭಾರ, ತೂಚಂಬಲಿ, ಬ್ರಹ್ಮಾರ್ಪಣೆ, ಸತ್ಯನಾರಾಯಣ ಪೂಜೆ, ನೆರ್ಪು, ದಶವಿಧ ಸ್ನಾನ, ನಿತ್ಯಪಪೂಜೆ, ಅಭಿಷೇಕ, ದೇವರ ಅವಬೃತ ಸ್ನಾನ, ದೇವರ ದರ್ಶನ, ವಸಂತ ಪೂಜೆ, ಶುದ್ಧ ಕಲಶ, ಚಾಮುಂಡಿ ದೇವರ ತೋತಾ ತೆರೆ, ಕುಟ್ಟಿಚಾತ ತೆರೆ, ಭೈರವ ತೆರೆ, ಕರಿಬಾಳ್ ಭಗವತಿ ತೆರೆ, ನುಚ್ಚುಟ್ಟೆ ತೆರೆ, ಕೊಂಡ ಹಾಯುವ ಆಚರಣೆಗಳು ನಡೆದವು. ಅನ್ನದಾನ ನಡೆಯಿತು.