ಕಣಿವೆ, ಮೇ ೧೬: ನಂಜರಾಯಪಟ್ಟಣದ ಶ್ರೀ ನಂಜುAಡೇಶ್ವರ ದೇವಾಲಯದ ವಾರ್ಷಿಕ ಪೂಜೋತ್ಸವದಲ್ಲಿ ಪಾಲ್ಗೊಂಡು ನೆರೆದ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹಾಳಾಗಿದ್ದ ನಂಜುAಡೇಶ್ವರ ದೇವಾಲಯ ಅಭಿವೃದ್ಧಿಗೊಂಡ ಬಳಿಕ ಇಲ್ಲಿನ ಜನಜೀವನವೂ ಅಭಿವೃದ್ಧಿ ಆಗಿದೆ. ಮಳೆ ಬೆಳೆಯೂ ಉತ್ತಮವಾಗಿ ಆಗುತ್ತಿದೆ ಎಂದರು.
ಸದ್ಭಕ್ತರಲ್ಲಿನ ಒಗ್ಗಟ್ಟು ಎಲ್ಲರ ಭಕ್ತಿ ಗ್ರಾಮದ ಶಕ್ತಿಯಾಗಿ ಕಂಗೊಳಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ದೇವಾಲಯದ ಪೂಜೋತ್ಸವಗಳು, ಸತ್ಸಂಗಗಳು ಮುಖ್ಯ ಪಾತ್ರವಹಿಸುತ್ತವೆ ಎಂದರು.
ವೀರಾಜಪೇಟೆ ತಾಲೂಕು ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಕಾರದ ಸಮಾಜ ಇರುವೆಡೆ ಮೌಲ್ವಿಕವಾದ ಪರಂಪರೆ ಉದ್ದೀಪನಗೊಳ್ಳುತ್ತದೆ ಎಂದರು. ಈ ದೇಶದಲ್ಲಿ ಆಗಿ ಹೋಗಿರುವ ಶರಣ ಪರಂಪರೆಯ ಮುಖ್ಯ ಉದ್ದೇಶ ಜನಸಮುದಾಯದ ಹಿತವಾಗಿದೆ.
ವಿಜ್ಞಾನ ಎಷ್ಟೆಲ್ಲಾ ಪ್ರಗತಿ ಸಾಧಿಸಿದರೂ ಕೂಡ ಮನುಷ್ಯನಿಗೆ ಬೇಕಾದ ಶಾಂತಿ, ಸಮಾಧಾನಗಳು ಲಭಿಸುತ್ತಿಲ್ಲ ಎಂದು ವಿಷಾದಿಸಿದ ಶ್ರೀಗಳು ಕಾಯಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಮೃಗೀಯ ಭಾವನೆಗಳನ್ನು ದೂರ ಮಾಡಿ ನಮ್ಮೊಳಗೆ ನಮ್ಮನ್ನು ನಾವು ಕಂಡುಕೊAಡು ಉತ್ತಮ ಜೀವನ ನಡೆಸಲು ಕರೆ ನೀಡಿದರು.
ಈ ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಸಿ.ಬಿ.ಪಾಪಯ್ಯ, ನಿವೃತ್ತ ಶಿಕ್ಷಕ ನಂಜುAಡ, ಕಾರ್ಯಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಮೋಹನಕುಮಾರ್, ಮುರುಳಿ ಮಾದಯ್ಯ, ಪ್ರೇಮಾನಂದ, ರತೀಶ್ ಮೊದಲಾದವರಿದ್ದರು.