ಗುಡ್ಡೆಹೊಸೂರು, ಮೇ ೧೬: ಕಾಡಾನೆ ದಾಳಿಗೆ ಜೋಳದ ಬೆಳೆ ನಾಶವಾದ ಘಟನೆ ಇಲ್ಲಿಗೆ ಸಮೀಪದ ಬೊಳ್ಳುರು ಸುಣ್ಣದಕೆರೆ ಗ್ರಾಮದಲ್ಲಿ ನಡೆದಿದೆ. ಮಂಡೆಪAಡ ಸೋಮಯ್ಯ (ರಘು) ಎಂಬವರ ಎರಡು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. ಕಳೆದ ರಾತ್ರಿ ಒಂಟಿ ಸಲಗ ಹೊಲಕ್ಕೆ ದಾಳಿ ನಡೆಸಿ ನಷ್ಟಪಡಿಸಿದೆ. ಕಳೆದ ರಾತ್ರಿ ಸೋಮಯ್ಯ ಅವರು ಹೊಲಕ್ಕೆ ತೆರಳಿದ ಸಂದರ್ಭ ಕೂದಲೆಳೆಯ ಅಂತರದಿAದ ದಾಳಿಯಿಂದ ಪಾರಾಗಿದ್ದಾರೆ.