ನಾಪೋಕ್ಲು, ಮೇ ೧೬ : ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವÀ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಮಂಗಳವಾರದ ಪಂದ್ಯಗಳಲ್ಲಿ ಮೂರು ತಂಡಗಳು ಮುನ್ನಡೆ ಸಾಧಿಸಿದವು.

ದಿನದ ಮೊದಲ ಪಂದ್ಯದಲ್ಲಿ ಕಾಣತಂಡ ವಿರುದ್ಧ ಅಟ್ರಂಗಡ ಸ್ಪರ್ಧಿಸಿತು. ಅಟ್ರಂಗಡ ತಂಡ ಎರಡು ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿದರೆ ಕಾಣತಂಡ ತಂಡ ೪ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿತು. ಈ ಪಂದ್ಯದಲ್ಲಿ ಅಟ್ರಂಗಡ ಜಯ ಸಾಧಿಸಿತು. ಮಾಚೆÀಟ್ಟಿರ ತಂಡ ಒಂಬತ್ತು ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿದ್ದು, ಉತ್ತರವಾಗಿ ಆಡಿದ ಮಾಳೇಟಿರ (ಕೆದಮುಳ್ಳೂರು) ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೩ ರನ್ ಗಳಿಸಿ ಜಯ ಸಾಧಿಸಿತು. ಕರೋಟಿರ ತಂಡ ಮೂರು ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿತು. ಉತ್ತರವಾಗಿ ಆಡಿದ ಬಲ್ಲಚಂಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೬ ರನ್ ಗಳಿಸಿ ಗೆಲುವು ಸಾಧಿಸಿತು. - ದುಗ್ಗಳ ಸದಾನಂದ